HomeKarnataka Newsನಾನು ಡಲ್ ಆಗಿಲ್ಲ, ಹೋರಾಟ ಅಂದ್ರೆ ನನ್ನ ಜೋಶ್ ಜಾಸ್ತಿ ಆಗುತ್ತೆ: CM ಸಿದ್ದರಾಮಯ್ಯ!

ನಾನು ಡಲ್ ಆಗಿಲ್ಲ, ಹೋರಾಟ ಅಂದ್ರೆ ನನ್ನ ಜೋಶ್ ಜಾಸ್ತಿ ಆಗುತ್ತೆ: CM ಸಿದ್ದರಾಮಯ್ಯ!

For Dai;y Updates Join Our whatsapp Group

Spread the love

ಬೆಂಗಳೂರು:- ನನ್ನ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪ್ರತಿಭಟನೆಯಿಂದ ನಾನು ಡಲ್ ಆಗಿಲ್ಲ, ಹೋರಾಟ ಅಂದ್ರೆ ನನ್ನ ಜೋಶ್ ಜಾಸ್ತಿ ಆಗುತ್ತೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.

ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಹಾಗೂ ರಾಜೀನಾಮೆಗೆ ಬಿಜೆಪಿ ಆಗ್ರಹದ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್‌ ಸುಳ್ಳು ದೂರುಗಳ ಮೂಲಕ ನನ್ನನ್ನು ಹಣಿಯುವುದಕ್ಕೆ ಮುಂದಾಗಿವೆ. ನಾನು ರಾಜಕೀಯ ಜೀವನದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಮುಂದೆಯೂ ಮಾಡುತ್ತೇನೆ. ಇಂಥ ಹೋರಾಟದ ಸಂದರ್ಭದಲ್ಲಿ ನನ್ನ ಜೋಶ್‌ ಜಾಸ್ತಿಯಾಗುತ್ತದೆ ಎಂದರು.

ನಾನು, ನನ್ನ‌ ರಾಜಕೀಯ ಜೀವನ ತೆರೆದ ಪುಸ್ತಕ. ನಿನ್ನೆಗೆ ನಾನು ಮಂತ್ರಿಯಾಗಿಯೇ ನಲುವತ್ತು ವರ್ಷಗಳಾದವು. ಯಾವತ್ತೂ ತಪ್ಪು ಮಾಡಿಲ್ಲ, ಮಾಡೋದೂ ಇಲ್ಲ. ನನ್ನಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲ. ನನ್ನ ಜೀವನದಲ್ಲಿ ಮಸಿ ಬಳಿಯಬೇಕು ಅಂತ ಇದನ್ನೆಲ್ಲ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ಆಪಾದಿಸಿದರು.

ಸುಳ್ಳು ಆಪಾದನೆ, ಕೇಸ್‌ ಇತ್ಯಾದಿಗಳ ಬಗ್ಗೆ ರಾಜಕೀಯವಾಗಿಯೂ ಹೋರಾಡುತ್ತೇನೆ; ಕಾನೂನಾತ್ಮಕವಾಗಿಯೂ ಹೋರಾಡುತ್ತೇನೆ. ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ತಡೆಯಾಜ್ಞೆ ಕೊಡಿ ಅಂತ ಕೇಳಿದ್ದೇವೆ. ನನ್ನ ಪರವಾಗಿ ವಾದಿಸಲು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬರ್ತಾ ಇದ್ದಾರೆ. ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!