ದಿನ ಬೆಳಗಾದರೆ ಯತ್ನಾಳ್ ಹಾಗೂ ಇತರರ ಬಗ್ಗೆ ಮಾತಾಡಲು ನಾನು ಸಿದ್ಧನಿಲ್ಲ: ಬಿವೈ ವಿಜಯೇಂದ್ರ

0
Spread the love

ಬೆಂಗಳೂರು: ದಿನ ಬೆಳಗಾದರೆ ಯತ್ನಾಳ್ ಹಾಗೂ ಇತರರ ಬಗ್ಗೆ ಮಾತಾಡಲು ನಾನು ಸಿದ್ಧನಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ. ದಿನ ಬೆಳಗಾದರೆ ಯತ್ನಾಳ್ ಹಾಗೂ ಇತರರ ಬಗ್ಗೆ ಮಾತಾಡಲು ನಾನು ಸಿದ್ಧನಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೋರಾಟ ಮಾಡಲು ಹಲವು ವಿಚಾರಗಳಿವೆ ಎಂದರು.

Advertisement

ಇನ್ನೂ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇವರು ಜನಕಲ್ಯಾಣ ಹೆಸರಲ್ಲಿ ಸಮಾವೇಶ ಮಾಡಿಕೊಂಡು ಕುಳಿತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಪ್ರವಾಸ ಮಾಡಿಕೊಂಡು ಬಂದಿದ್ದೇನೆ. ರೈತರ ಬೆಳೆಗಳು ಸಂಕಷ್ಟದಲ್ಲಿವೆ, ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಇದರ ಸಮೀಕ್ಷೆ ಮಾಡುವುದು ಬಿಟ್ಟು ಸಮಾವೇಶಗಳಲ್ಲಿ ವ್ಯಸ್ತವಾಗಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು..


Spread the love

LEAVE A REPLY

Please enter your comment!
Please enter your name here