ಮುಂದಿನ KMF ಅಧ್ಯಕ್ಷ ನಾನೇ: ನಂಜೇಗೌಡ!

0
Spread the love

ಬೆಂಗಳೂರು: ಮುಂದಿನ KMF ಅಧ್ಯಕ್ಷ ನಾನೇ ಎಂದು ಮಾಲೂರು ಶಾಸಕ ನಂಜೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ನನಗೆ ಭರವಸೆ ನೀಡಿದ್ದು ನಾನೇ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ಅಧ್ಯಕ್ಷನಾಗುತ್ತೇನೆ.

Advertisement

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎನ್ನುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೀಮಾ ನಾಯಕ್ ಆಯ್ಕೆ ಆಗುವಾಗ ಮುಂದೆ ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎಂದರು. ನನಗೆ ಅನುಭವ ಇದ್ದು, ಕೆಎಂಎಫ್‌ ಅಧ್ಯಕ್ಷ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೆ.

ಆಗ ನನಗೆ ಮಾತು ನೀಡಿದ್ದರು. ಅಂದು ಮಾತು ಕೊಟ್ಟಂತೆ ನಾನೇ ಅಧ್ಯಕ್ಷ ಆಗುತ್ತೇನೆ ಎಂದರು. ರಾಘವೇಂದ್ರ ಹಿಟ್ನಾಳ್ ಏನು ನನಗೆ ಅಡ್ಡಿ ಆಗುವುದಿಲ್ಲ. ಇದರಲ್ಲೂ ಹೈಕಮಾಂಡ್ ತೀರ್ಮಾನವೇ ಅಂತಿಮ. ನಂಗೆ ಅವತ್ತು ಮಾತು ಕೊಟ್ಟಿದ್ರು. ಈಗ ಭೀಮಾ ನಾಯಕ್ ಸಮಯ ಮುಗಿದಿದೆ. ಈಗ ನನಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here