ಬೆಂಗಳೂರು: ಸುರೇಶ್ ಅವರ ಗೆಲುವಿಗೆ ಕಾರಣನಾಗಿರುವಂತೆ ಒಮ್ಮೆ ಸೋಲಿಗೂ ಕಾರಣನಾಗಿದ್ದೇನೆ ಎಂದು ಸಿಪಿ ಯೋಗೇಶ್ವರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಅವರು, ಕಳೆದ ಮೂರೂವರೆ ದಶಕಗಳಿಂದ ತಾನು ಮತ್ತು ಡಿಕೆ ಸಹೋದರರು ರಾಜಕಾರಣದಲ್ಲಿದ್ದೇವೆ, 3-4 ಸಲ ಸುರೇಶ್ ಅವರ ಗೆಲುವಿಗೆ ಕಾರಣನಾಗಿರುವಂತೆ ಒಮ್ಮೆ ಸೋಲಿಗೂ ಕಾರಣನಾಗಿದ್ದೇನೆ.̤
Advertisement
ಕೆಲವೊಮ್ಮೆ ನಾವೇ ಕಟ್ಟಿದ ಮನೆಯಲ್ಲಿ ನಾವು ಇರಲು ಸಾಧ್ಯವಾಗುವುದಿಲ್ಲ. ಕಳೆದ ಕೆಲ ದಿನಗಳಿಂದ ಸಾಕಷ್ಟು ಬೆಳವಣಿಗೆ ಆಗಿವೆ. ಬಿಜೆಪಿಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದರು. ರಾಜಕೀಯ ಜೀವನವನ್ನು ಇದೇ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಶುರು ಮಾಡಿದ್ದೆ. ಹೋದೆ ಬಂದೆ ಮತ್ತೆ ಬಂದಿದ್ದೇನೆ. ಮುಂದಿನ ರಾಜಕೀಯ ಜೀವನ ಇಲ್ಲೆ ಕಳೆಯುತ್ತೇನೆ ಎಂದುಕೊಂಡಿದ್ದೇನೆ ಎಂದು ಹೇಳಿದರು.