ಬೆಂಗಳೂರು: ಕೇಂದ್ರ ಸರ್ಕಾರದ ನಿರ್ಣಯವನ್ನ ನಾನು ಮೆಚ್ಚುತ್ತೇನೆ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ ಹಾಡಿ ಹೊಗಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ 3 ಸೇನಾಪಡೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ತಕ್ಕ ಉತ್ತರ ಕೊಟ್ಟಿದೆ. ಆದರೂ ಪಾಕಿಸ್ತಾನ ಪ್ರತಿ ಬಾರಿ ಅಧಿಕಪ್ರಸಂಗ ತನ ಮಾಡ್ತಿದೆ. ಮೈಮೇಲೆ ಹಾಕಿಕೊಂಡು ಬೇರೆ ಬೇರೆ ದೇಶದ ಸಹಾಯ ಪಡೆದುಕೊಳ್ತಿದೆ. ಭಾರತ ಸರ್ಕಾರದ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದ ನಿರ್ಣಯವನ್ನ ನಾನು ಮೆಚ್ಚುತ್ತೇನೆ ಎಂದರು.
ಪಾಕಿಸ್ತಾನದ ಹೇಳಿಕೆಯನ್ನ ನಂಬೋಕೆ ಆಗೊಲ್ಲ. ಪಹಲ್ಗಾಮ್‌ನಲ್ಲಿ 28 ಜನ ಅಮಾಯಕರನ್ನ ಹತ್ಯೆ ಮಾಡಿದ್ರು. ಆ ಹತ್ಯೆಗೆ ಇನ್ನೂ ಸೇಡು ತೆಗೆದುಕೊಳ್ಳಬೇಕು. ಭಾರತ ಸರ್ಕಾರ, ಸೇನೆ ಉತ್ತಮ ಕೆಲಸ ಮಾಡ್ತಿದ್ದಾರೆ, ಅದನ್ನ ಮೆಚ್ಚಬೇಕು. ಈಗಾಗಲೇ ನಮ್ಮ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ. ನಾವೆಲ್ಲಾ ಭಾರತೀಯರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಸೇನೆ ಹಿಂದೆ ನಿಲ್ಲಬೇಕು ಎಂದು ಕರೆ ಕೊಟ್ಟರು.