ಬೆಂಗಳೂರು: ಯತ್ನಾಳ್ ಅವರನ್ನು ನಾನು ರಾಜಕೀಯದಲ್ಲಿ ಹೋಲಿಸಲಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರನ್ನು ನಾನು ರಾಜಕೀಯದಲ್ಲಿ ಹೋಲಿಸಲಾಗದು,
ಯತ್ನಾಳ್‌ಗೆ ಹೋಲಿಸಿಕೊಂಡರೆ ನಾನು ರಾಜಕೀಯದಲ್ಲಿ ತುಂಬಾ ಚಿಕ್ಕವನು. ರಾಜ್ಯದ ಅಧ್ಯಕ್ಷನಾಗಿ ಎಲ್ಲರನ್ನೂ ಒಟ್ಟಾಗಿ ತಗೊಂಡು ಹೋಗುವ ಪ್ರಯತ್ನ ಮಾಡಿದ್ದೇನೆ.
ನಾನು ಹಿಂದೊಂದು ಮುಂದೊಂದು ಮಾತಾಡುವ ವ್ಯಕ್ತಿ ಅಲ್ಲ. ನನ್ನ ಕಡೆಯಿಂದ ಎಲ್ಲವೂ ಸರಿಯಾಗಬೇಕೆಂದು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ವಿಧಿಯಾಟನೋ ಏನೋ ಗೊತ್ತಿಲ್ಲ ಹೈಕಮಾಂಡ್ ನಾಯಕರು ಕೊನೆಗೆ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.



