ಹುಬ್ಬಳ್ಳಿ :ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಈ ವಿಚಾರವಾಗಿ ನವೆಂಬರ್ 25 ರಿಂದ ಡಿಸೆಂಬರ್ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಅಭಿಯಾನವು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಈ ಜನ ಜಾಗೃತಿ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬೇರೆ ಯಾವುದೇ ತಂಡ ಜಾಗೃತಿ ಅಭಿಯಾನ ಮಾಡಲು ನೈತಿಕ ಹಕ್ಕಿಲ್ಲ ಎಂದು ಯತ್ನಾಳ್ ಟೀಮ್ ವಿರುದ್ಧ ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ, ಹಾಗೂ ಹಾದಿ ಬೀದಿಲಿ ಹೋಗೋರಿಗೆ ನಾನು ಉತ್ತರ ಕೊಡಲ್ಲ. ಪಕ್ಷದಲ್ಲಿರುವವರಿಗೆ ಯಾವ ವಕ್ಫ ಹೋರಾಟ ಬೇಕಾಗಿಲ್ಲ ಎಂದು ಪ್ರತಾಪ್ ಸಿಂಹ ಹೆಸರನ್ನು ಕೈ ಬಿಟ್ಟಿರೋದಕ್ಕೆ ಗರಂ ಆದರು.
ಇನ್ನೂ ವಿಜಯೇಂದ್ರ ಬಗ್ಗೆ ಮಾತನಾಡಿದ ಯತ್ನಳ್ ಇದು ಅಪ್ಪ ಮಕ್ಕಳ ದಂಧೆ ಎಂದು ಹೇಳಿದರು. ಡಿಸೆಂಬರ್ 25 ಕ್ಕೆ ಜನಜಾಗೃತಿ ಸಭೆ ನಡೆಸುತ್ತಿದ್ದಾರೆ. ವಕ್ಪ್ ಪ್ರವಾಸಕ್ಕೆ ಮೂರು ತಂಡಗಳನ್ನು ಮಾಡಿದ್ದಾರೆ. ಆದರೆ ಈ ತಂಡಗಳಿಗೆ ಅಪ್ಪ ಅವ್ವ ಯಾರು ಇಲ್ಲ ನಮ್ಮನ್ನು ನೋಡಿ ಮೂರು ತಂಡ ರಚನೆ ಮಾಡಿದ್ದಾರೆ. ಅವರಿಗೆ ವಕ್ಪ್ ಕಾಳಜಿ ಇಲ್ಲ, ಅವರಿಗೆ ಇರೋದು ಅಪ್ಪನ ತರಹ ಲೂಟಿ ಮಾತ್ರ ಎಂದು ಪರೋಕ್ಷವಾಗಿ ವಿಜಯೇಂಂದ್ರ ವಿರುದ್ದ ಕಿಡಿಕಾರಿದ್ದಾರೆ.