ಸುಂಕದ ವಿಚಾರದಲ್ಲಿ ಭಾರತವನ್ನು ನಾನು ಒಪ್ಪಲ್ಲ- ಟ್ರಂಪ್!

0
Spread the love

ವಾಷಿಂಗ್ಟನ್:- ಭಾರತ ನನ್ನ ಉತ್ತಮ ಗೆಳೆಯನಾದರೂ ಸುಂಕದ ವಿಚಾರದಲ್ಲಿ ನಾನು ಭಾರತವನ್ನು ಒಪ್ಪುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಭಾರತ ಎಂದಿಗೂ ನಮ್ಮ ಉತ್ತಮ ಗೆಳೆಯ. ಆದರೆ ಸುಂಕದ ವಿಚಾರದಲ್ಲಿ ಭಾರತವನ್ನು ಒಪ್ಪಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ದೇಶ ಭಾರತ ಎಂಬುದಷ್ಟೇ ನನ್ನ ಸಮಸ್ಯೆ. ಏ.2ರಿಂದ ಜಾರಿಗೆ ಬರುವಂತೆ ಭಾರತ ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕ ಭಾರತದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತದೆ ಎಂದು ಪುನರುಚ್ಚರಿಸಿದರು.

ಇನ್ನೂ ಈ ಮಧ್ಯೆ, ವೆಚ್ಚ ಕಡಿತದ ಭಾಗವಾಗಿ ಶಿಕ್ಷಣ ಇಲಾಖೆಯನ್ನೇ ಬಂದ್ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಟ್ರಂಪ್ ಸೂಚನೆ ನೀಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಅಮೆರಿಕ ಸಂಸತ್‌ನ ಅನುಮೋದನೆ ಇಲ್ಲದೇ ಶಿಕ್ಷಣ ಇಲಾಖೆಯನ್ನು ಬಂದ್ ಮಾಡೋಕೆ ಆಗಲ್ಲ ಎನ್ನಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here