ಕಲಬುರಗಿ: ಜಾತಿಗಣತಿ ವರದಿಯಲ್ಲಿ ಏನೆಲ್ಲಾ ಅಂಶಗಳಿವೆ ಎಂಬುದು ನನಗೆ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜಾತಿಗಣತಿ ವರದಿಯಲ್ಲಿ ಏನೆಲ್ಲಾ ಅಂಶಗಳಿವೆ ಎಂಬುದು ಇನ್ನೂ ನಿಖರವಾಗಿ ನನಗೆ ಗೊತ್ತಿಲ್ಲ.
Advertisement
ನಾನೂ ಸಹ ವರದಿ ನೋಡಿಲ್ಲ. ಜಾತಿಗಣತಿ ವರದಿ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇದು ನನ್ನ ಅಭಿಪ್ರಾಯ ಅಷ್ಟೇ ಎಂದು ಸಮಜಾಯಿಷಿ ನೀಡಿದರು.
ಇನ್ನೂ ಪ್ರತಿಯೊಂದು ರಾಜ್ಯದಲ್ಲಿ ಸರ್ಕಾರಗಳು ಜಾತಿಗಣತಿ ಮಾಡಿಕೊಳ್ಳುತ್ತವೆ. ಇದು ಕೇಂದ್ರ ಸರ್ಕಾರದಿಂದ ಮಾಡಿರುವಂಥದ್ದಲ್ಲ. ಹಾಗಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಏನು ಹೊರಗೆ ಬರುತ್ತದೋ ಎಂಬುದನ್ನು ನೋಡಬೇಕಿದೆ ಎಂದರು.