ರಾಜಣ್ಣರನ್ನು ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ: ಜಿ. ಪರಮೇಶ್ವರ್!

0
Spread the love

ಬೆಂಗಳೂರು: ರಾಜಣ್ಣರನ್ನು ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸೋಮವಾರ ವಿಧಾನಸೌಧದಲ್ಲಿ ನನ್ನ ಜೊತೆಗೆ ಮಾತಾನಾಡಿದ್ದರು.

Advertisement

ಅವರಿಗೂ ಕೂಡ ಕಾರಣ ಏನು ಅನ್ನೋದು ಗೊತ್ತಿಲ್ಲ. ನನಗೆ ಹೈಕಮಾಂಡ್ ಜೊತೆಗೆ ಮಾತಾನಾಡಿ, ಕಾರಣ ಕೇಳಿ ಎಂದು ಹೇಳಿದರು. ಅದಕ್ಕೆ ನಾನು ಈಗಾಗಲೇ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ಈಗ ಕೇಳಿ ಪ್ರಯೋಜನ ಇಲ್ಲ ಎಂದು ಸುಮ್ಮನಾದೆ ಎಂದು ತಿಳಿಸಿದರು.

ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಅನ್ನೋದು ಅಷ್ಟು ವಿವರವಾಗಿ ಗೊತ್ತಿಲ್ಲ. ಸಿಎಂ ಮತ್ತು ಅಧ್ಯಕ್ಷರಿಗೆ ಗೊತ್ತಿರಬಹುದು. ನಮ್ಮ ಪಕ್ಷದ ಹೈಕಮಾಂಡ್‌ನಲ್ಲಿ ಕೆಲವು ನಿಯಮಗಳಿವೆ. ಅವರದ್ದೇ ಆದ ನಿಬಂಧನೆಗಳಿವೆ. ರಾಜಣ್ಣ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಅವ್ರಿಗೂ ಕಾರಣ ಗೊತ್ತಿಲ್ಲ. ಅವ್ರು ರಾಜೀನಾಮೆ ಪತ್ರ ಕೊಡೋದಕ್ಕೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಹೈಕಮಾಂಡ್‌ನಿಂದ ತೆಗೆಯಿರಿ ಎಂದು ಪತ್ರ ಬಂದಿದೆ ಎಂದರು


Spread the love

LEAVE A REPLY

Please enter your comment!
Please enter your name here