ಬಿಎಸ್‌’ವೈ ಬಗ್ಗೆ ಮಾತಾಡಿದ್ರೆ ನಾನು ಸುಮ್ನಿರಲ್ಲ: ರೇಣುಕಾಚಾರ್ಯ

0
Spread the love

ದಾವಣಗೆರೆ:- ಬಿಎಸ್‌ವೈ ಬಗ್ಗೆ ಮಾತಾಡಿದ್ರೆ ನಾನು ಸುಮ್ನಿರಲ್ಲ ಎಂದು ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲರಾಗಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ದೆಹಲಿಗೆ ತೆರಳಲಿರುವ ವಿಚಾರ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿಗೆ ಬೇಕಾದರೂ ಹೋಗಲಿ. ಅದರೆ ಬಿಎಸ್‌ವೈ ಬಗ್ಗೆ ಮಾತನಾಡಿದ್ರೆ ನಾನು ಸುಮ್ನಿರಲ್ಲ. ಬಿಎಸ್ ವೈ ಕರೆದು ಹೊಡೆದರೂ ಚಿಂತೆಯಿಲ್ಲ. ನಾನು ಹೀಗೆ ಮಾತಾಡುತ್ತೇನೆ ಎಂದರು.

Advertisement

ವಿ ಸೋಮಣ್ಣ ಸಿದ್ದಗಂಗಾಮಠಕ್ಕೆ ಹೋಗಿದ್ದ ಶ್ರೀಗಳ ದರ್ಶನಕ್ಕೆ ಅಲ್ಲಿ ರಾಜಕೀಯ ಮಾಡಲಿಕ್ಕೆ ಅಲ್ಲ. ಮಠದಲ್ಲಿ ಬಿಎಸ್‌ವೈ ಮಾತಾಡುವ ಅವಶ್ಯಕತೆ ಏನಿತ್ತು? ವಿ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ. ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ. ವಿಧಾನ ಸಭೆ ಸೋಲು ಹೊಡೆತವನ್ನು ವರಿಷ್ಠರು ನೋಡಿದ್ದಾರೆ. ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದೇ ಬಿಎಸ್ ವೈ. ಬಿಎಸ್ ವೈ ರೆಡಿ ಮೇಡ್ ಫುಡ್ ಅಲ್ಲ.

ಸೋಮಣ್ಣ ಬಂದಿದ್ದು ಕಾಂಗ್ರೆಸ್‌ನಿಂದ. ಅವರಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಅವರು ಕಾಂಗ್ರೆಸ್ ನಿಂದ ಬಂದು ಅಧಿಕಾರ ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಸೋತರು ಸಹ ಎಂಎಲ್ ಸಿ ಆಗಿ ಅಧಿಕಾರ ಅನುಭವಿಸಿದ್ದಾರೆ. ಬಿಎಸ್‌ವೈ ನಿಮ್ಮನ್ನೂ ಸಚಿವರನ್ನಾಗಿ ಮಾಡಿದ್ದೇ ತಪ್ಪಾ? ಕಾಂಗ್ರೆಸ್ ನಿಂದ ಬಂದು ಸಚಿವರಾಗಲಿಲ್ಲವೇ? ಆಗ ನಮಗೇನು ಸಾಮಾರ್ಥ್ಯ ಇರಲಿಲ್ಲವೆ? ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಬಿಎಸ್‌ವೈ ವಿರುದ್ಧ ಮಾತಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.


Spread the love

LEAVE A REPLY

Please enter your comment!
Please enter your name here