ಬೆಂಗಳೂರು;- ನನಗೆ ಯಾರ ಬೆಂಬಲವೂ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಯಾರಾದ್ರೂ ಶಾಸಕರು ನನ್ನ ಪರವಾಗಿ ಮಾತನಾಡಿದ್ರೆ ನೋಟಿಸ್ ಇಶ್ಯೂ ಮಾಡ್ತೀನಿ ಎಂದು ಶಾಸಕರ ವಿರುದ್ಧ ಗರಂ ಆಗಿದ್ದಾರೆ.
Advertisement
ಯಾರಾದ್ರೂ ಶಾಸಕರು ನನ್ನ ಪರವಾಗಿ ಮಾತನಾಡಿದ್ರೆ ನೋಟಿಸ್ ಇಶ್ಯೂ ಮಾಡ್ತೀನಿ. ಪಕ್ಷದಲ್ಲಿ ಒಂದು ಶಿಸ್ತು ಇರಬೇಕು. ನನಗೆ ಯಾವ ಶಾಸಕರ ಬೆಂಬಲನೂ ಬೇಡ, ಯಾವ ಶಾಸಕರೂ ಬೇಡ. ರಾಮನಗರ MLA ಇಕ್ಬಾಲ್ ಹುಸೇನ್ಗೆ ನೋಟಿಸ್ ಕೊಡಬೇಕು ಎಂದು ಕೊಂಡಿದ್ದೀನಿ. ನನಗೆ ಯಾರ ರೆಕಮೆಂಡೇಶನ್ ಕೂಡ ಬೇಡ. ಐ ಡೋಂಟ್ ವಾಂಟ್ ಏನೀ ರೆಕಮೆಂಡೇಶನ್ ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ.