ಬಾಗಲಕೋಟೆ: ಉಗ್ರರು ಧರ್ಮವನ್ನು ಪ್ರಶ್ನಿಸಿ ಗುಂಡಿನ ದಾಳಿ ಮಾಡಿರಬಹುದು ಎಂದು ಅನಿಸುತ್ತಿಲ್ಲ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಭಯೋತ್ಪಾದಕರು ಧರ್ಮವನ್ನು ಪ್ರಶ್ನಿಸಿ ಗುಂಡಿನ ದಾಳಿ ಮಾಡಿರಬಹುದು ಎಂದು ಅನಿಸುತ್ತಿಲ್ಲ.
ಯಾರಾದರೂ ಗುಂಡಿನ ದಾಳಿ ಮಾಡುವಾಗ ನಿಂತುಕೊಂಡು ಪ್ರಶ್ನೆ ಮಾಡುತ್ತಾರೆಯೇ? ಹಾಗೆ ಮಾಡಿರಬಹುದು ಎಂದು ಅನಿಸುತ್ತಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಅದು ಕ್ರೂರ ಕೃತ್ಯ ಎಂದಿದ್ದಾರೆ. ಸಚಿವರ ಹೇಳಿಕೆಗೆ ಇದೀಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.
ಪಲ್ಲವಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದಾಳಿಯ ಆಘಾತದಿಂದ ಮನಸು ವಿಚಲಿತಗೊಂಡು ಅವರು ಹಾಗೆ (ಮುಸ್ಲಿಮರಾ ಎಂದು ಕೇಳಿ ದಾಳಿ ಮಾಡಿದ್ದಾರೆ ಎಂಬ ಹೇಳಿಕೆ) ಹೇಳಿರಬಹುದು.
ತನ್ನ ಮಗನನ್ನು ಮುಸ್ಲಿಮರೇ ರಕ್ಷಿಸಿದ್ದಾರೆಂದು ಪಲ್ಲವಿ ಅವರೇ ಹೇಳಿದ್ದಾರೆ ಎಂದಿದ್ದಾರೆ. ಗುಪ್ತಚರ ವೈಫಲ್ಯವನ್ನು ಮುಚ್ಚಿ ಹಾಕಲು, ಭಯೋತ್ಪಾದಕ ದಾಳಿಗೆ ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಸರಿಯಲ್ಲ. ಇಂಥ ಘಟನೆಗಳನ್ನು ಚುನಾವಣೆ ದೃಷ್ಟಿಯಿಂದ ನೋಡಬಾರದು ಎಂದು ಸಚಿವರು ಹೇಳಿದ್ದಾರೆ.