ಹಾವೇರಿ: ನಾನು ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿದ್ದೇನೆ ಎಂದು ಶಿಗ್ಗಾವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಎಂದು ಜಮೀರ್ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿದ್ದೇನೆ.
ಜಮೀರ್ ಅಹಮದ್ ಅವರೇ ನೀವು ಶಿಗ್ಗಾವಿ ಕ್ಷೇತ್ರಕ್ಕೆ ಒಂದೂವರೆ ವರ್ಷದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ ಎಂದು ಸವಾಲು ಹಾಕಿದರು. ಇಡಿ ಸರ್ಕಾರ ಬೊಮ್ಮಾಯಿಯನ್ನು ಸೊಲಿಸಲು ಬಂದಿದ್ದಾರೆ ಈ ಚುನಾವಣೆ ಬೊಮ್ಮಾಯಿ ವರ್ಸಸ್ ಕರ್ನಾಟಕ ಸರ್ಕಾರ, ಎಲ್ಲರೂ ದುಡ್ಡಿನ ಚೀಲ ತುಂಬಿಕೊಂಡು ಬಂದಿದ್ದಾರೆ. ಅದನ್ನು ಹಂಚುತ್ತಿದ್ದಾರೆ.
ನಾನೂ ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು. ಕಳೆದ ಆರೇಳು ತಿಂಗಳಲ್ಲಿ ಪೊಲೀಸ್ ಸ್ಟೇಷನ್ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ನ ಪುಢಾರಿಗಳು ಕ್ಷೇತ್ರದಲ್ಲಿ ಕ್ಲಬ್ ನಡೆಸುತ್ತಿದ್ದಾರೆ. ಇದು ಬದುಕಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಅವರು ನಾಲ್ಕು ದಿನ ಜಾತ್ರೆ ಮಾಡಲು ಬಂದಿದ್ದಾರೆ. ಅವರನ್ನು ತಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.