HomeEntertainmentನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ನಟ ಕಮಲ್ ಹಾಸನ್

ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ನಟ ಕಮಲ್ ಹಾಸನ್

For Dai;y Updates Join Our whatsapp Group

Spread the love

ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಸ್ವತಂತ್ರ್ಯ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಕೋಟ್ಯಾಂತರ ಕರುನಾಡಿಗರ ಜೀವನಾಡಿಯಾಗಿರುವ ನಮ್ಮ ಕನ್ನಡ ಭಾಷೆಗೆ ನಟ ಕಮಲ್ ಹಾಸನ್ಅವಮಾನಿಸಿದ್ದು ಸ್ವಾಭಿಮಾನಿ ಕನ್ನಡಿಗರು ನಿಜಕ್ಕೂ ಕೆರಳುವಂತೆ ಮಾಡಿದೆ.

ಇದೀಗ ಮತ್ತೆನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲಎಂದಿದ್ದಾರೆ ಚೆನ್ನೈನಲ್ಲಿ ಬಗ್ಗೆ ಮಾತನಾಡಿರುವ ನಟ ಕಮಲ್ ಹಾಸನ್ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು & ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆಎಂದು ಸ್ಪಷ್ಟಪಡಿಸಿದ್ದಾರೆ.

ಕಮಲ್ ಹಾಸನ್ ಸಿನಿಮಾಥಗ್ ಲೈಫ್ ಕರ್ನಾಟಕದ ವಿತರಣೆ ಹಕ್ಕನ್ನು ಖರೀದಿಸಿರುವ ವೆಂಕಟೇಶ್ ಅವರನ್ನು ನಿನ್ನೆ ಫಿಲಂ ಚೇಂಬರ್ಗೆ ಕರೆಸಿ ಸಭೆ ನಡೆಸಲಾಗಿದ್ದು, ಕಮಲ್ ಹಾಸನ್ ಬಳಿ ಕ್ಷಮೆ ಕೇಳಿಸುವ ಜವಾಬ್ದಾರಿಯನ್ನು ವೆಂಕಟೇಶ್ ಹೆಗಲಿಗೆ ಹಾಕಲಾಗಿತ್ತು. ವೆಂಕಟೇಶ್ ಸಹ, ತಾವು ಪರಿಸ್ಥಿತಿಯ ಗಂಭೀರತೆಯನ್ನು ಕಮಲ್ ಅವರಿಗೆ ಮನವರಿಕೆ ಮಾಡಿ ಅಗತ್ಯ ಹೆಜ್ಜೆ ಇಡುವಂತೆ ಮನವಿ ಮಾಡುತ್ತೇವೆ ಎಂದಿದ್ದರು. ಅದಾದ 24 ಗಂಟೆಯೊಳಗೆ ಕಮಲ್ ಹಾಸನ್, ತಾವು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!