ಬೆಂಗಳೂರು: ನನಗೆ ಮೋದಿ ಹಾಗೂ ಅವರ ತಾಯಿ ಬಗ್ಗೆ ಅಪಾರವಾದ ಗೌರವವಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ತಾಯಿ ಬಗ್ಗೆ ಮಾತನಾಡಿದವರನ್ನು ಮಂತ್ರಿ ಮಾಡಿದ್ದಾರೆ. ಬಿಜೆಪಿ ಅವರು ಮೋದಿ ತಾಯಿ ಬಗ್ಗೆ ಮಾತನಾಡಿದವರನ್ನು ಸಹಿಸಿಕೊಂಡಿರಬಹುದು. ಆದರೆ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ನನಗೆ ಮೋದಿ ಹಾಗೂ ಅವರ ತಾಯಿ ಬಗ್ಗೆ ಅಪಾರವಾದ ಗೌರವವಿದೆ. ನಾನು ಅವರ ಬಗ್ಗೆ ಎಂದೂ ಮಾತನಾಡಿಲ್ಲ. ನಾವು ರಾಜಕೀಯವಾಗಿ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿರುತ್ತೇವೆ. ಒಬ್ಬ ದೇಶದ ಪ್ರಧಾನಿಗೆ, ಗೃಹ ಮಂತ್ರಿಗೆ, ವಿರೋಧ ಪಕ್ಷದ ನಾಯಕನಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ. ನಮಗೆ ಅದು ಗೊತ್ತಿದೆ. ಆದರೆ ಅವರು ಕೀಳಾಗಿ ಮಾತನಾಡಿದಾಗ ನಾವೂ ಕೀಳಾಗಿ ಉತ್ತರ ಕೊಡಬೇಕಾಗುತ್ತೆ ಎಂದರು.



