ಬೆಂಗಳೂರು: ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ, ಸೆಟ್ಲ್ ಆಗೋದಿಕ್ಕೆ ಕೊಂಚ ಸಮಯ ಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ನೂತನ ಪೊಲೀಸ್ ಕಮೀಷನರ್ ಆಗಿ ಚಾರ್ಜ್ ವಹಿಸಿಕೊಂಡ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸ್ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದ್ರು.
ಅಲ್ಲದೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಾತಾಡಿದ ನೂತನ ಕಮಿಷನರ್, ದುರಂತದ ಕುರಿತು ಎಫ್ಐಆರ್ ದಾಖಲಾಗಿದ್ದು, ತನಿಖೆ ಕೂಡ ನಡೀತಿದೆ ಎಂದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಘಟನೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಸದ್ಯಕ್ಕೆ ಏನೂ ಹೇಳಲು ನನಗೆ ಆಗೋದಿಲ್ಲ. ಪ್ರಕರಣವನ್ನ ಸಿಐಡಿ ಕೊಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಸದ್ಯಕ್ಕೆ ನಾವೇ ತನಿಖೆ ಮಾಡ್ತಿದ್ದೇವೆ, ಸ್ಪೆಷಲ್ ಟೀಂ ಕಾರ್ಯಾಚರಣೆ ನಡೆಸ್ತಿದೆ ಎಂದು ಹೇಳಿದ್ದಾರೆ.