ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಜೊತೆ ನನ್ನ ಅಡ್ಜೆಸ್ಟ್ಮೆಂಟ್ ಇಲ್ಲ: ಶಾಸಕ ಯತ್ನಾಳ್

0
Spread the love

ಬೆಂಗಳೂರು: ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಜೊತೆ ನನ್ನ ಅಡ್ಜೆಸ್ಟ್ಮೆಂಟ್ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ವಿಜಯೇಂದ್ರ ಅಮಿತ್ ಶಾ ಭೇಟಿ ಮಾಡಿ ದೂರು ನೀಡಿರುವ ವಿಚಾರವಾಗಿ ಮಾತನಾಡಿದ ಅವರು,

Advertisement

ಪಕ್ಷದಿಂದ ನನ್ನ ಉಚ್ಚಾಟನೆ ಆಗುವುದಿಲ್ಲ. ಉಚ್ಚಾಟನೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಮಾಡಿರುವುದು. ನನ್ನನ್ನ ಯಾಕೆ ಉಚ್ಚಾಟನೆ ಮಾಡುತ್ತಾರೆ? ನಾನು ಯಾರ ಜೊತೆಯೂ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಜೊತೆ ನನ್ನ ಅಡ್ಜೆಸ್ಟ್ಮೆಂಟ್ ಇಲ್ಲ ಎಂದಿದ್ದಾರೆ.

ಇನ್ನೂ ವಿಜಯೇಂದ್ರಗೆ ದೆಹಲಿ ನಾಯಕರು ಪದೇ ಪದೇ ಅಪಾಯಿಟ್‌ಮೆಂಟ್ ಕೊಡುತ್ತಿದ್ದಾರೆ ಅದಕ್ಕೆ ಹೋಗುತ್ತಾರೆ. ಆದರೆ ನಾವು ಯಾರ ಅಪಾಯಿಟ್‌ಮೆಂಟ್ ಕೇಳಿಲ್ಲ. ನಾವು ಯಾರ ಮೇಲೂ ದೂರು ಕೊಡುವುದಿಲ್ಲ. ನಮ್ಮದು ಜನರ ಆಂದೋಲ. ನಮ್ಮದು ದಿಲ್ಲಿ ಆಂದೋಲ ಅಲ್ಲ. ನನ್ನಂತ ಪಕ್ಷ ನಿಷ್ಠ ಯಾರು ಇಲ್ಲ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here