ನನಗೆ ಸಂಸತ್‌ಗೆ ಹೋಗುವ ಆಸೆ ಇಲ್ಲ, ರಾಜ್ಯದಲ್ಲೇ ಇರುತ್ತೇನೆ: ಸಿಎಂ ಸಿದ್ದರಾಮಯ್ಯ

0
Spread the love

ಬೆಂಗಳೂರು:- ನನಗೆ ಸಂಸತ್‌ಗೆ ಹೋಗುವ ಆಸೆ ಇಲ್ಲ, ರಾಜ್ಯದಲ್ಲೇ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ರಸಗೊಬ್ಬರ ಅಭಾವದ ಚರ್ಚೆ ವೇಳೆ ನಡೆದ ಗದ್ದಲ ಕುರಿತು ಸದಸ್ಯರಿಗೆ ಪಾಠ ಮಾಡುವ ಸಂದರ್ಭದಲ್ಲಿ ಸಿಎಂ ಈ ಸ್ಪಷ್ಟನೆ ನೀಡಿದರು. ವಿಪಕ್ಷ ನಾಯಕ ಆರ್‌ ಅಶೋಕ್‌ ನೀವು ಕೇಂದ್ರಕ್ಕೆ ಹೋಗಿ ಎಂದು ಸಿದ್ದರಾಮಯ್ಯರವನ್ನು ಕಾಲೆಳೆದರು. ಇದಕ್ಕೆ ಸಿಎಂ, ನಾನು ಇಲ್ಲಿರೋದು ಇಷ್ಟ ಇಲ್ವಾ ನಿನಗೆ? ನನ್ನನ್ನು ಇಲ್ಲಿಂದ ಕಳಿಸಬೇಕು ಅನ್ಕೊಂಡಿದ್ದೀಯಾ ಎಂದು ಮರು ಪ್ರಶ್ನೆ ಹಾಕಿದರು.

ಈ ಹಿಂದೆ ನನಗೆ ಸಂಸತ್‌ಗೆ ಹೋಗಬೇಕು ಎಂಬ ಒಲವು ಇತ್ತು.‌ ಈಗ ಅದು ಇಲ್ಲ, ಎರಡು ಸಲ ನನ್ನ ಜನ ತಿರಸ್ಕರಿಸಿದ್ದಾರೆ. ನನಗೆ ಈಗ ಸಂಸತ್‌ಗೆ ಹೋಗುವ ಆಸೆ ಇಲ್ಲ.‌ ಎಲ್ಲರಿಗೂ ಸಂಸತ್ ಪ್ರವೇಶ ಮಾಡುವ ಆಸೆ ಇರುತ್ತದೆ ಎಂದರು. ಆಸೆ ಇರುವುದು ತಪ್ಪೇನಿಲ್ಲ. ಆಸೆ ಇರಬೇಕು, ದುರಾಸೆ ಇರಬಾರದು.‌ ಆದರೆ ನನಗೆ ಈಗ ಸಂಸತ್‌ಗೆ ಹೋಗುವ ಆಸೆ ಇಲ್ಲ. ನಾನು ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದರು.


Spread the love

LEAVE A REPLY

Please enter your comment!
Please enter your name here