ಬೆಂಗಳೂರು:- ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಎನ್ ರವಿಕುಮಾರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ನಾನು ಯಾವುದೇ ಅವಹೇಳನಕಾರಿಯಾಗಿ ಹೇಳಿಕೆ ನೀಡಿಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿದರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಮುಖ್ಯ ಕಾರ್ಯದರ್ಶಿಯವರು ಅವರು 24 ಗಂಟೆ ಬ್ಯುಸಿ ಇದ್ದಾರೆ. ಹಾಗಾಗಿ ಅವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದೆ. ಹಗಲಲ್ಲಿ ಸಿಎಂ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾರೆ, ರಾತ್ರಿಯೆಲ್ಲ ಸರ್ಕಾರದ ಕೆಲಸ ಮಾಡ್ತಾರೆ ಅಂದೆ. ಇದರೊಳಗೆ ಏನು ತಪ್ಪಿದೆ? ನಾನು ಅವಾಚ್ಯ ಶಬ್ಧ ಬಳಸಿಲ್ಲ ಎಂದು ತಿಳಿಸಿದರು.
ಅವಾಚ್ಯ ಶಬ್ಧ ಬಳಸಿದರೆ ಕಾಂಗ್ರೆಸ್‌ನವರು ಬಹಿರಂಗಪಡಿಸಲಿ. ನನಗೂ ನನ್ನ ಮನೆಯಲ್ಲಿ ಸಹೋದರಿಯರು ಇದ್ದಾರೆ. ಯಾರ ಜತೆ ಹೇಗೆ ಮಾತನಾಡಬೇಕೆಂಬ ಪರಿಜ್ಞಾನ ಇದೆ. ಮುಖ್ಯ ಕಾರ್ಯದರ್ಶಿಗೆ ಆ ರೀತಿ ಮಾತನಾಡಲು ಸಾಧ್ಯಾನಾ? ಯಾರಿಗೇ ಆಗಲೀ ಆಥರ ಮಾತಾಡೋದು ಸಾಧ್ಯನಾ? ಅವಾಚ್ಯ ಶಬ್ಧ ಇದ್ದರೆ ನೇಣು ಹಾಕಿಕೊಳ್ತೇನೆ. ನನ್ನ ವಿರುದ್ಧ ದ್ವೇಷದಿಂದ ಕಾಂಗ್ರೆಸ್‌ನವರು ದೂರು ಕೊಟ್ಟಿದ್ದಾರೆ ಎಂದು ರವಿಕುಮಾರ್ ಸ್ಪಷ್ಟ ಪಡಿಸಿದರು.