ಬೆಳಗಾವಿ: ಕಾಂಗ್ರೆಸ್ ಕಚೇರಿ ಕಟ್ಟಲು ನಾನೇ 1 ಕೋಟಿ 27 ಲಕ್ಷ ರೂ. ಹಣವನ್ನ ಕೊಟ್ಟಿದ್ದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, 2013-18ರ ವರೆಗೆ ಕಾಂಗ್ರೆಸ್ ಪಕ್ಷದ ಕಚೇರಿ ಆಗಿದ್ದರ ಬಗ್ಗೆ ಹೇಳಿದ್ರು.. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧ್ಯಕ್ಷೆಯಾಗಿದ್ದರು. ಅಂದು ಮಹಾದೇವಪ್ಪ ಅವರು ಕಟ್ಟಡ ನಿರ್ವಹಣೆ ಕಮಿಟಿ ಅಧ್ಯಕ್ಷರಾಗಿದ್ದರು.
ಆಗ ನಾನು ಶಾಸಕನಾಗಿದ್ದೆ, ಹೆಬ್ಬಾಳ್ಕರ್ ನಾವು ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ವಿ. ಶಂಕ್ರಾನಂದ ಅವರ ಹೆಸರಿನಲ್ಲಿ ಜಾಗ ಇದ್ದು ಅವರ ಮಕ್ಕಳಿಗೆ ಜಾಗ ನೀಡುವಂತೆ ಕನ್ವೆನ್ಸ್ ಮಾಡಿದ್ದೆ. ಆರ್‌ಟಿಓ ಸರ್ಕಲ್ ನಲ್ಲಿ ಜಾಗ ಬಿಟ್ಟು ಕೊಡುವಂತೆ ಕನ್ವೆನ್ಸ್ ಮಾಡಿದ್ದೆ. ಬಳಿಕ ಕ್ಯಾಬಿನೆಟ್ ಗೆ ತಂದು ಆ ಜಾಗ ಮಂಜೂರು ಮಾಡಿಸಿದೆ. ನಾನು 54 ಲಕ್ಷ ಜಾಗಕ್ಕೆ ಹಣ ನೀಡಿ ಖರೀದಿ ಪ್ರಕ್ರಿಯೆ ಮಾಡಿಸಿದ್ವಿ ಎಂದು ಸ್ಪಷ್ಟಪಡಿಸಿದರು.
ಇನ್ನೂ ಎರಡು ಪಾರ್ಟ್ ಮೂಲಕ ಹಣವನ್ನ ಮಾಲೀಕರಿಗೆ ನೀಡಿದ್ವಿ. ನಾನೇ ಸ್ವಂತ 27 ಲಕ್ಷ ರೂ. ಹಣವನ್ನ ಮೊದಲ ಕಂತನಲ್ಲಿ ಹಣ ನೀಡಿದೆ. ಜಾಗ ಖರೀದಿಯಾದ ಮೇಲೆ ಕಚೇರಿ ನಿರ್ಮಾಣ ನೆನೆಗುದಿಗೆ ಬಿತ್ತು. ನಾನು ಮಂತ್ರಿಯಾದ ಮೇಲೆ ಒಂದು ಕೋಟಿ ಹಣ ಕೈಯಿಂದ ಕೊಟ್ಟೆ. ನಾನು 1 ಕೋಟಿ 27 ಲಕ್ಷ ಹಣ ಕಾಂಗ್ರೆಸ್ ಕಚೇರಿ ಕಟ್ಟಲು ನೀಡಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ನಾನು ಮಾಡಿದ್ದೇನೆ ಎಂದು ಹೇಳುತ್ತಿರುವುದು ತಪ್ಪು. ಕಾಂಗ್ರೆಸ್ ನ ಎಲ್ಲ ಶಾಸಕರು ಕೂಡ ಹಣ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.