ವಿಜಯನಗರ: ಪಕ್ಷ ಬಿಡುತ್ತೇನೆ, ಬೇರೆ ಪಕ್ಷ ಸೇರುತ್ತೇನೆ ಎಂದು ಯಾವತ್ತೂ ಹೇಳಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಬಿ ಶ್ರೀರಾಮುಲು ಹೇಳಿದ್ದಾರೆ. ಖಾಸಾಹೊಸಳ್ಳಿಯಲ್ಲಿ ಮಾತಾಡಿದ ಶ್ರೀರಾಮುಲು, ಪಕ್ಷ ಬಿಡುತ್ತೇನೆ, ಬೇರೆ ಪಕ್ಷ ಸೇರುತ್ತೇನೆ ಎಂದು ಯಾವತ್ತೂ ಹೇಳಿಲ್ಲ,
ಪಕ್ಷದ ಸಂಘಟನೆ ಬಗ್ಗೆ ಮಾತಾಡಿದ್ದೇನೆ ಮತ್ತು ಅದನ್ನು ಬಲಪಡಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇನ್ನೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಯಾವತ್ತೂ ಪಾರ್ಟಿಯ ವಿರುದ್ಧ ಮಾತಾಡಿದವರಲ್ಲ, ಕೆಲ ವ್ಯಕ್ತಿಗಳ ವಿರುದ್ಧ ಅವರು ಮಾತಾಡಿದ್ದಾರೆ, ವ್ಯಕ್ತಿಗತ ಟೀಕೆಯು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆಯಾಗಲಾರದು, ಯತ್ನಾಳ್ ನಿರಂತರವಾಗಿ ಪಕ್ಷದ ಒಳಿತನ್ನು ಬಯಸಿದ್ದಾರೆ ಎಂದರು.



