ಬಾಗಲಕೋಟೆ: ಅವಕಾಶ ಸಿಕ್ಕರೆ ಸಿ.ಟಿ.ರವಿ ಮುಗಿಸಬೇಕೆಂಬ ಉದ್ದೇಶವಿತ್ತು ಅನಿಸುತ್ತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅವಕಾಶ ಸಿಕ್ಕರೆ ಸಿ.ಟಿ.ರವಿ ಮುಗಿಸಬೇಕೆಂಬ ಉದ್ದೇಶವಿತ್ತು ಅನಿಸುತ್ತೆ. ಆದರೆ, ಸರಿಯಾದ ಅವಕಾಶ ಸಿಕ್ಕಿಲ್ಲ. ನಮ್ಮ ಎಂಎಲ್ಸಿ ಕೇಶವಪ್ರಸಾದ್ ಕೂಡ ಅವರ ಹಿಂದೆ ಇದ್ದರು.
Advertisement
ನಮಗೆ ಸಿ.ಟಿ.ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು ಎಂದರು. ಅಂತಹ ರಾತ್ರಿಯೊಳಗೆ ಬೆಳಗಾವಿ ಮಾಧ್ಯಮದವರು ಬೆನ್ನು ಹತ್ತಿದ್ದರು. ವಿಡಿಯೋ ಮಾಡುತ್ತಿದ್ದರು ಲೊಕೇಶನ್ ಹಾಕುತ್ತಿದ್ದರು. ಇಲ್ಲದೆ ಹೋಗಿದ್ದರೆ ಸಿಟಿ ಅವರನ್ನ ಫೇಕ್ಎನ್ಕೌಂಟರ್ ಮಾಡುವಂತ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅಂತ ನನಗೆ ಅನಿಸುತ್ತದೆ ಎಂದು ಹೇಳಿದ್ದಾರೆ.