HomeEntertainmentರಾಜನನ್ನು ರಾಜನ ಥರನೇ ನನಗೆ ನೋಡೋಕೆ ಇಷ್ಟ: ರಚಿತಾ ರಾಮ್ ಕಣ್ಣೀರು

ರಾಜನನ್ನು ರಾಜನ ಥರನೇ ನನಗೆ ನೋಡೋಕೆ ಇಷ್ಟ: ರಚಿತಾ ರಾಮ್ ಕಣ್ಣೀರು

For Dai;y Updates Join Our whatsapp Group

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅವರ ಜೈಲು ವಾಸ ಮುಂದುವರಿದಿದೆ. ಹೀಗಾಗಿ ದರ್ಶನ್ ಭೇಟಿಗೆ ಎಲ್ಲರೂ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಬೇಕಾದ ಸಂದರ್ಭ ಬಂದಿದೆ. ಇಂದು ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ, ದರ್ಶನ್ರನ್ನು ಭೇಟಿಯಾಗಿ ಬಂದಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಸರ್ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಅವರನ್ನು ಹಾಗೇ ನೋಡೋಕೆ ಕಷ್ಟ ಆಗುತ್ತಿದೆ. ಎಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಹೇಳಿ ಬಿಟ್ಟು ಬಂದೆ ನಾವೆಲ್ಲರೂ ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇವೆ.

ಪ್ಲೀಸ್ ಬೇಗ ಬನ್ನಿ ಅಂತ. ನನಗೆ ಕಾನೂನು ಮೇಲೆ ನಂಬಿಕೆ ಇದೆ. ದರ್ಶನ್ ಸರ್ ಆದಷ್ಟು ಬೇಗ ಹೊರಗೆ ಬರುತ್ತಾರೆ ಎಂದು ನಂಬಿಕೆ ಇದೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.ರಾಜನನ್ನು ರಾಜನ ಥರನೇ ನನಗೆ ನೋಡೋಕೆ ಇಷ್ಟ. ಇವತ್ತು ಅವರನ್ನು ನೋಡಿ ನಿರಾಳವಾಯ್ತು ಎಂದು ನಟಿ ಭಾವುಕರಾಗಿದ್ದಾರೆ.

ಅವರು ಅಲ್ಲಿ ಆರೋಗ್ಯವಾಗಿ ಆರಾಮ ಆಗಿ ಇದ್ದಾರೆ. ನಾನು ಅವರ ಬ್ಯಾನರ್‌ನಿಂದ ಪರಿಚಯ ಆದವಳು. ನನಗೆ ಇವತ್ತು ಏನೇ ಹೆಸರು ಇದ್ದರೂ ಅದು ಅವರಿಂದ ಸಿಕ್ಕಿದೆ. ಅವರು ಅವತ್ತು ಒಪ್ಪಿಕೊಂಡಿದಕ್ಕೆ ನಾನು ಬಿಂದ್ಯಾ ರಾಮ್‌ನಿಂದ ರಚಿತಾ ರಾಮ್ ಆಗಿ ಬೆಳೆದಿದ್ದು.

ನಾನು ಯಾವಗಲೂ ಅವರ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ. ಅವರನ್ನು ನೋಡಿ ನಾನೇ ಕಣ್ಣೀರಿಟ್ಟೆ ಆದರೆ ಅವರೇ ನನಗೆ ಸಮಾಧಾನ ಮಾಡಿದರು. ಅವರು ಆದಷ್ಟು ಬೇಗ ಹೊರಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!