ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 ಈಗಾಗಲೇ ಟ್ರೈಲರ್ ಮೂಲಕ ಸದ್ದು ಮಾಡುತ್ತಿದ್ದು ಅಕ್ಟೋಬರ್ ಎರಡರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಟ್ರೈಲರ್ ರಿಲೀಸ್ ಆದ ಹಿನ್ನೆಲೆಯಲ್ಲಿ ಮೊದಲ ಭಾರಿಗೆ ಕಾಂತಾರ ಚಿತ್ರತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದು ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಂಡಿದೆ. ಈ ವೇಳೆ ಸಿನಿಮಾದ ಶೂಟಿಂಗ್ ವೇಳೆ ನಾಲ್ಕೈದು ಸಲ ನಾನೇ ಹೋಗಿಬಿಡಬೇಕಿತ್ತು ಎಂಬ ಶಾಕಿಂಗ್ ವಿಚಾರವನ್ನು ಹೇಳಿದ್ದಾರೆ.
‘ಕಾಂತಾರ ಶುರು ಮಾಡಿದ ಮೇಲೆ ಸೆಟ್ನಲ್ಲಿ ಹಾಗಾಯ್ತು, ಹೀಗಾಯ್ತು ಎಂದೆಲ್ಲ ಮಾಧ್ಯಮಗಳಲ್ಲಿ ಸುದ್ದಿ ಬಂತು. ಲೆಕ್ಕ ಹಾಕಬೇಕು ಅಂದ್ರೆ ನಾನು ನಾಲ್ಕೈದು ಸಲ ಹೋಗೇಬಿಡ್ತಿದ್ದೆ. ಆದರೆ ನಾನು ಇವತ್ತಿನವರೆಗೂ ಬದುಕಿ ಬಂದು, ಈ ಸಿನಿಮಾವನ್ನ ನನ್ನ ಹೆಗಲ ಮೇಲೆ ಹಾಕೊಂಡು ಇಡೀ ತಂಡದ ಜೊತೆ ಬಂದು ನಿಮ್ಮೆಲ್ಲರ ಮುಂದೆ ನಿಂತಿದ್ದೀನಿ’ ಎಂದು ಹೇಳಿದ್ದಾರೆ.
‘ಈ ಸಿನಿಮಾ ನಿಮ್ಮೆಲ್ಲರಿಗೆ ತೋರಿಸ್ತೀವಿ. ನನ್ನ ಹಿಂದೆ ಆ ದೈವ ಇದೆ ಅನ್ನೋದೇ ನನ್ನ ನಂಬಿಕೆ. ಆ ದೈವವೇ ನಮ್ಮ ಇಡೀ ತಂಡಕ್ಕೆ ಆಶೀರ್ವಾದ ಮಾಡಿ ಇವತ್ತು ನಮ್ಮೆಲ್ಲರನ್ನ ಇಲ್ಲಿವರೆಗೆ ಕರೆತಂದಿದೆ’ ಎಂದಿದ್ದಾರೆ.



