ಬೆಂಗಳೂರು: ನನಗೆ ಟಿಕೆಟ್ ಕೊಡಿ ಅಂತ ಸಿದ್ದರಾಮಯ್ಯ ಮುಂದೆ ಕೈ ಚಾಚಿದವನು ನಾನಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲೋಕಸಭಾ ಟಿಕೆಟ್ ಕೇಂದ್ರ ಚುನಾವಣೆ ಸಮಿತಿ ಕೊಡೋದು. ನನಗೆ ಟಿಕೆಟ್ ಕೊಡಿ ಅಂತ ಸಿದ್ದರಾಮಯ್ಯ ಮುಂದೆ ಕೈ ಚಾಚಿದವನು ನಾನಲ್ಲ.
ಆ ದುಸ್ಥಿತಿ ನನಗೆ ಬರಬಾರದು. ಯಾರೋ ಕಿಡಿಗೇಡಿಗಳು ನನಗೆ ಎಂಎಲ್‌ಸಿ ಮಾಡಲಿಲ್ಲ ಅಂತ ಹೇಳಬಹುದು. ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಏನೇನೂ ಅಲ್ಲ ಎಂದು ಹೇಳಿದ್ದಾರೆ.
ನನಗೆ ಟಿಕೆಟ್ ಕೊಟ್ಟಿದ್ರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ತಿದ್ದೆ. ಏಕೆಂದರೆ ಅಷ್ಟರ ಮಟ್ಟಿಗೆ ನಾನು ವರ್ಚಸ್ಸು ಬೆಳೆಸಿಕೊಂಡಿದ್ದೇನೆ. ನನಗೆ ಯಾರ ಮೇಲೂ ಹಗೆ ಇಲ್ಲ. 2013 ರ ಸರ್ಕಾರದಲ್ಲಿ ಇದೇ ಸಿದ್ದರಾಮಯ್ಯ ಬದಲಾವಣೆ ಅನ್ನೋ ಚರ್ಚೆಗಳು ಬಂದಾಗ ಮುಂದುವರೆಸಿ ಅಂದವನು ನಾನು. ಈ ಸರ್ಕಾರದಲ್ಲೂ ಸಿದ್ದರಾಮಯ್ಯನವರನ್ನೇ ಸಿಎಂ ಮಾಡಿ ಅಂದಿದ್ದು ನಾನೇ ಎಂದು ಹೇಳಿದ್ದಾರೆ.