ಹಾಸನ: ನಾನು ಸಾಯುವವರೆಗೂ ಸಿಎಂ ಸಿದ್ದರಾಮಯ್ಯ ಜೊತೆ ಇರುವೆ ಎಂದು ಡಿಕೆ ಶಿವಕುಮಾರ್ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೃಹತ್ ಜನ ವಿಕಾಸ ಸಮಾವೇಶ ನಡಯಿತು. ಈ ವೇಳೆ ಮಾತನಾಡಿದ ಅವರು, ತಲೆ ಕೆಡಿಸಿಕೊಳ್ಳಬೇಡಿ ಈ ಬಂಡೆ ಡಿಕೆ ಸಿದ್ದರಾಮಯ್ಯ ಜತೆ ಇದೆ. ಈಗಲೂ ಇರುತ್ತೇನೆ, ನಾಳೆನೂ ಇರುತ್ತೇನೆ, ಸಾಯುವವರೆಗೂ ಇರುವೆ ಎಂದು ಹೇಳಿದರು.
Advertisement
ಇನ್ನೂ ಈ ಹಾಸನದ ಇತಿಹಾಸ ನೋಡಿದರೆ ನೋವಾಗುತ್ತೆ. ಹಲವು ರಾಜಕೀಯ ಕುಟುಂಬಗಳು ನೋವುಂಡಿವೆ. ಹಾಸನಾಂಬೆ ಆ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಬೇಕು ಎಂದರು. ನಿಮ್ಮ ಹಾಸನದ ಮಾಜಿ ಸಂಸದರ ಸಾಕ್ಷಿಗುಡ್ಡೆ ಬಗ್ಗೆ ಮಾತನಾಡಲು ಅಸಹ್ಯವಾಗುತ್ತೆ. ವಿಜಯೇಂದ್ರ ಹಾಗೂ ಕುಮಾರಸ್ವಾಮಿಗೆ ಉಪಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ಇನ್ನು ಮುಂದೆ ಹಾಸನದ ಏಳು ವಿಧಾನಸಭೆ ಕ್ಷೇತ್ರ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.