HomeGadag Newsಸಮಾಜದ ಅಭಿವೃದ್ಧಿಗೆ ಕೈಜೋಡಿಸುವೆ

ಸಮಾಜದ ಅಭಿವೃದ್ಧಿಗೆ ಕೈಜೋಡಿಸುವೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಳಸಾಪೂರ ರಸ್ತೆಯ ಪಂಚಮಸಾಲಿ ಸೇವಾ ಟ್ರಸ್ಟ್ನ ವತಿಯಿಂದ 1 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಚನ್ನಮ್ಮ ಭವನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿಯವರಿಗೆ ಪಂಚಮಸಾಲಿ ಸೇವಾ ಟ್ರಸ್ಟ್ನ ಸದಸ್ಯರು ಸಂಸದರ ನಿಧಿಯಿಂದ 2 ಕೋಟಿ ರೂ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ನಿಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನಿಡುತ್ತೇನೆ. ನಿವು ಸಲ್ಲಿಸಿರುವ ಬೇಡಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಪಂಚಮಸಾಲಿ ಸೇವಾ ಟ್ರಸ್ಟ್ನ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಉಪಾಧ್ಯಕ್ಷ ಸಿದ್ಧಪ್ಪ ಪಲ್ಲೇದ, ಕಾರ್ಯದರ್ಶಿ ಅನಿಲಕುಮಾರ ಪಾಟೀಲ, ಖಜಾಂಚಿ ವಿಜಯಕುಮಾರ ನೀಲಗುಂದ, ಸದಸ್ಯರಾದ ಶಾಂತಪ್ಪ ಮುಳವಾಡ, ಬಾಲಚಂದ್ರ ಭರಮಗೌಡ್ರ, ರಾಮನಗೌಡ ದಾನಪ್ಪಗೌಡ್ರ, ಶೇಖಣ್ಣ ಬೆಂತೂರ, ಪ್ರಕಾಶ ಮ್ಯಾಗೇರಿ, ಮಾಲತೇಶ ಪಾಟೀಲ, ಸಿದ್ಧನಗೌಡ ಪಾಟೀಲ, ಮಾಲತೇಶಗೌಡ ಹಿರೇಮನಿಪಾಟೀಲ, ಶಂಕರ ಕರಿಬಿಷ್ಠಿ, ಸುರೇಶ ಚಿತ್ತರಗಿ, ವಿಶ್ವನಾಥ ಹಳ್ಳಿಕೇರಿ, ಸಿದ್ಧಲಿಂಗೇಶ ಕರಿಬಿಷ್ಠಿ, ವಸಂತ ಪಡಗದ, ಸಂಗಮೇಶ ಕವಳಿಕಾಯಿ, ಶಿವರಾಜಗೌಡ ಹಿರೇಮನಿಪಾಟೀಲ, ಶರಣಪ್ಪ ಬೋಳನವರ, ಸಂತೋಷ ಅಕ್ಕಿ, ಸಂತೋಷ ಕಬಾಡರ, ಉದಯರವಿ ಗುಡಿಮನಿ, ವೀರಣ್ಣ ಮೇಟಿ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!