ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕವೂ ರಕ್ಷಿತಾ ಶೆಟ್ಟಿ ಹೆಸರು ಟ್ರೆಂಡ್ ಆಗುತ್ತಿದೆ. ರನ್ನರ್ ಅಪ್ ಆಗಿದ್ದರೂ ಅಭಿಮಾನಿಗಳ ಹೃದಯದಲ್ಲಿ ವಿನ್ನರ್ ಆಗಿರುವ ರಕ್ಷಿತಾ ಇದೀಗ ವಿಡಿಯೋ ಮೂಲಕ ಭಾವುಕ ಧನ್ಯವಾದ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, “ನನ್ನನ್ನು ಮನೆಮಗಳಂತೆ ನೋಡಿದ್ದೀರಿ. ಇದಕ್ಕಿಂತ ದೊಡ್ಡ ಆಶೀರ್ವಾದ ಬೇರೆ ಏನು ಬೇಕಿಲ್ಲ” ಎಂದು ಹೇಳಿದ್ದಾರೆ. ಕರ್ನಾಟಕದ ಜನತೆ ನೀಡಿದ ಪ್ರೀತಿ ಹಾಗೂ ಬೆಂಬಲವೇ ನನ್ನ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.
“ಬಿಗ್ ಬಾಸ್ ಮನೆಯೊಳಗೆ ಇರುವಾಗ ಜನರು ಇಷ್ಟು ಪ್ರೀತಿ ಕೊಡ್ತಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಹೊರಬಂದ ಮೇಲೆ ಕಾಮೆಂಟ್, ಮೆಸೇಜ್, ವೀಡಿಯೊ ನೋಡಿ ಅಚ್ಚರಿ ಆಯ್ತು. ಇದು ಕನಸಾ ಅಂತ ಅನಿಸ್ತು” ಎಂದು ಹೇಳಿದ್ದಾರೆ.
ತಮಗೆ ಬಂದ ವೋಟ್, ಸಮಯ, ಪ್ರೀತಿ ಎಲ್ಲಕ್ಕೂ ಧನ್ಯವಾದ ಹೇಳಿರುವ ರಕ್ಷಿತಾ, “ನನಗೋಸ್ಕರ ಇಷ್ಟು ಶ್ರಮಪಟ್ಟಿದ್ದೀರಾ, ನಿಮ್ಮ ಶ್ರಮವೂ ನನ್ನ ಶ್ರಮದಷ್ಟೇ ಇದೆ” ಎಂದು ಹೇಳಿದ್ದಾರೆ.
ಮುನ್ಸೂಚನೆಯಾಗಿ ನೆಗೆಟಿವ್ ಕಾಮೆಂಟ್, ಟ್ರೋಲ್ ಎದುರಿಸಿದ್ದ ರಕ್ಷಿತಾ, ಇದೀಗ “ಈಗ ಎಲ್ಲೆಡೆ ಪ್ರೀತಿ ಮಾತ್ರ ಕಾಣ್ತಿದೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಮೀಮ್ಸ್ ಮಾಡಿದವರು, ಯೂಟ್ಯೂಬರ್ಸ್, ಇನ್ಫ್ಲೂಯೆನ್ಸರ್ಸ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
“ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ಈ ಪ್ರೀತಿಯನ್ನು ನಾನು ಜೀವನಪೂರ್ತಿ ಮರೆಯಲ್ಲ” ಎಂದು ಹೇಳುವ ಮೂಲಕ ಅಭಿಮಾನಿಗಳ ಮನವನ್ನು ಇನ್ನಷ್ಟು ಗೆದ್ದಿದ್ದಾರೆ.



