ಶಿವಮೊಗ್ಗ: ನಾನು ಸಿದ್ದರಾಮಯ್ಯ ಅವರನ್ನು ನನ್ನ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹಿಂದೂ ಪರ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ ಮುಖ್ಯಮಂತ್ರಿ ಅಲ್ಲ. ನಾನು ಅವರನ್ನು ನನ್ನ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ.
ರಾಷ್ಟ್ರದ ವಿಚಾರ ಬಂದಾಗ ಯಾರು ತೆವಳಿಕೊಂಡು ಹೋಗುತ್ತಾರೋ ಅವರು ನನ್ನ ಸಿಎಂ ಅಲ್ಲ. ಒಂದು ತರ ಮನಮೋಹನ್ ಸಿಂಗ್ ಅವರ ಮುಂದುವರೆದ ಭಾಗವನ್ನು ನಡೆಸಿಕೊಂಡು ಹೋಗಲು ಅವರು ಭಾವಿಸಿದ್ದಾರೆ. ಪ್ರಧಾನಿ ಮೋದಿಯವರು ಭಾರತದ ಒಬ್ಬನಿಗೂ ನೋವಾದರೆ ಪ್ರತಿಕಾರ ತೆಗೆದುಕೊಳ್ಳುವಂತವರು ಎಂದು ಹೇಳಿದರು.
ಇದೇ ವೇಳೆ ಸಚಿವ ತಿಮ್ಮಾಪುರ ವಿವಾದತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅವರ ಹೇಳಿಕೆಯನ್ನ ವಿವಾದಾತ್ಮಕ ಹೇಳಿಕೆ ಎಂದು ಕರೆಯುವುದೇ ತಪ್ಪು, ಅದು ಒಂದು ದೇಶ ದ್ರೋಹ. ತಿಮ್ಮಾಪುರ ಅವರು ಈ ದೇಶದ ದಾರಿಯನ್ನ ತಪ್ಪಿಸುವುದಕ್ಕೆ ನೋಡುತ್ತಿದ್ದಾರೆ. ಅವರು ದೇಶದ್ರೋಹದ ಜೊತೆಗೆ ಮಾನವೀಯತೆಗೆ ವಿರುದ್ಧ ಇದ್ದಾರೆ ಅದಕ್ಕೆ ಧಿಕ್ಕಾರವಿರಲಿ ಎಂದರು.