ನಾನು ಕಮಲ್ ಹಾಸನ್ ಮಾತನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ: ನಟ ಅಹಿಂಸಾ ಚೇತನ್

0
Spread the love

ದಾವಣಗೆರೆ: ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಸ್ವತಂತ್ರ್ಯ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಕೋಟ್ಯಾಂತರ ಕರುನಾಡಿಗರ ಜೀವನಾಡಿಯಾಗಿರುವ ನಮ್ಮ ಕನ್ನಡ ಭಾಷೆಗೆ ನಟ ಕಮಲ್ ಹಾಸನ್‌ ಅವಮಾನಿಸಿದ್ದು ಸ್ವಾಭಿಮಾನಿ ಕನ್ನಡಿಗರು ನಿಜಕ್ಕೂ ಕೆರಳುವಂತೆ ಮಾಡಿದೆ.

Advertisement

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅಹಿಂಸಾ ಚೇತನ್ ಪ್ರತಿಕ್ರಿಯೇ ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾನು ಕಮಲ್ ಹಾಸನ್ ಅವರ ಮಾತನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ. ನಮ್ಮ ಮಾತು ಸತ್ಯ ಅಲ್ಲವೆಂದು ಗೊತ್ತಾದಾಗ ಕ್ಷಮೆ ಕೇಳಬೇಕು.

ಅದನ್ನು ಬಿಟ್ಟು ಕ್ಷಮೆ ಕೇಳಲ್ಲವೆಂದು ವಾದಕ್ಕಿಳಿಯಬಾರದು. ಪಂಚ ದ್ರಾವಿಡ ಭಾಷೆಗಳಲ್ಲಿ ಸೋದರ ಸಹೋದರಿ ಭಾಷೆಗಳಿವೆ. ಸಂಸದ ಯದುವೀರ್ ಅವರ ಹೇಳಿಕೆ ಕೂಡ ಕಮಲ್ ಹಾಸನ್ ಅವರಂತೆಯೇ ಇದೆ. ಅವರೂ ಕೂಡ ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here