ರನ್ಯಾ ಕೇಸ್‌ನಲ್ಲಿ ನಂಟು ಹೊಂದಿರುವ ಸಚಿವರ ಹೆಸರು ಶೀಘ್ರದಲ್ಲೇ ಬಿಚ್ಚಿಡುತ್ತೇನೆ: ಯತ್ನಾಳ್!

0
Spread the love

ವಿಜಯಪುರ :- ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ನಂಟು ಹೊಂದಿರುವ ರಾಜ್ಯ ಸಚಿವರ ಹೆಸರು ಅಧಿವೇಶನದಲ್ಲಿ ಬಿಚ್ಚಿಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಫೋಟಕ ಹೇಳಿಕೆ ನೀಡಿದರು.

Advertisement

ಈ ಸಂಬಂಧ ಮಾತನಾಡಿದ ಅವರು, ಪ್ರಕರಣದ ನಂಟು ಹೊಂದಿರೋ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೊಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟುಕೊಂಡು ತಂದ್ರು? ಎಲ್ಲವೂ ಗೊತ್ತಿದೆ ಎಂದು ಹೇಳಿದರು.

ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪಿದೆ ಎಂಬ ಸಚಿವ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್‌, ಯಾರು ತಪ್ಪು ಮಾಡಿದ್ರೆ ಅದು ತಪ್ಪೆ. ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ರೆ ತಪ್ಪೆ, ನಮ್ಮ ಕೇಂದ್ರದ ಸಚಿವರು ಇದ್ರಲ್ಲಿ ಭಾಗಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here