ವಿಜಯಸಾಕ್ಷಿ ಸುದ್ದಿ, ರೋಣ: ಜನಸೇವೆಯ ಮೂಲಕ ರೋಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಜನಸಾಮಾನ್ಯರ ಸೇವೆ ಮಾಡಿ ಸರಳತೆಯ ವ್ಯಕ್ತಿತ್ವ ಹೊಂದಿರುವ ಮಿಥುನ್ ಜಿ. ಪಾಟೀಲರು ಜನಾನುರಾಗಿಯಾಗಿದ್ದಾರೆ ಎಂದು ಯುವ ಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಹೇಳಿದರು.
ರೋಣ ನಗರದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ಜನನಾಯಕ ಮಿಥುನ್ ಜಿ. ಪಾಟೀಲರ 48ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಈಗಾಗಲೇ ರೋಣ ಮತಕ್ಷೇತ್ರದ ಡಂಬಳ ಹೋಬಳಿಯಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆ ಜಾರಿಗೊಳಿಸಿ ರೈತರ ಕಷ್ಟ ದೂರ ಮಾಡಿದ ಶಾಸಕ ಜಿ.ಎಸ್. ಪಾಟೀಲರ ಕಾರ್ಯ ಅವರ ಹೆಸರನ್ನು ಅಜರಾಮರವಾಗಿಸಿದೆ. ಜನ ಸಾಮಾನ್ಯರ ಕಷ್ಟ ಅರಿತು, ಬಡವರು, ದೀನ ದಲಿತರ ಬಗ್ಗೆ ಕಾಳಜಿ ಹೊಂದಿದ ಪಾಟೀಲ ಕುಟುಂಬದ ಜನಪರ ಕೆಲಸಗಳು ಈ ಕ್ಷೇತ್ರಕ್ಕೆ ಮಾದರಿಯಾಗಿದೆ. ಜಿ.ಎಸ್. ಪಾಟೀಲ ಹಾದಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಯುವ ನಾಯಕ ಮಿಥುನ್ ಜಿ. ಪಾಟೀಲರಿಗೆ ಮುಂಬರುವ ದಿನಮಾನಗಳಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಿಥುನ್ ಜಿ. ಪಾಟೀಲ, ನಮ್ಮ ತಂದೆಯವರ ಇಚ್ಛೆಯಂತೆ ಬಡವರ, ಹಿಂದುಳಿದವರ, ರೈತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು. ಜನ್ಮದಿನದ ನಿಮಿತ್ತ ಆರೋಗ್ಯ ರಕ್ತದಾನ ಶಿಬಿರ ಸೇರಿದಂತೆ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ವಿ.ಬಿ. ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಅಭಿಷೇಕ ನವಲಗುಂದ, ಮುತ್ತುರಾಜ ನವಲಗುಂದ, ಗೋಪಿ ರಾಯನಗೌಡರ, ಬಸವರಾಜ ಪೂಜಾರ, ಹಾಲಪ್ಪ ಡೊಳ್ಳಿನ, ಅನಿಲಕುಮಾರ ಪಲ್ಲೇದ, ಬಸವರಾಜ ಕುಸಗಲ್, ಸಿದ್ದಪ್ಪ ಹಡಪದ, ಫಕ್ಕಿರಪ್ಪ ಕರಿಗಾರ ಸೇರಿದಂತೆ ರೋಣ ಮತಕ್ಷೇತ್ರದ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.



