ಹಾಸನ: ನನ್ನ ಕೆಲಸ, ನನ್ನ ಹೋರಾಟ, ಜನರ ಭಾವನೆ ನನ್ನ ಮೇಲೆ ಇತ್ತು ಅದಕ್ಕೆ ಗೆದ್ದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನ್ನ ಕೆಲಸ, ನನ್ನ ಹೋರಾಟ, ಜನರ ಭಾವನೆ ನನ್ನ ಮೇಲೆ ಇತ್ತು ಅದಕ್ಕೆ ಗೆದ್ದೆ. ಒಬ್ಬನೇ ಒಬ್ಬ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಗೆದ್ದಿರೋದು.
Advertisement
ಮಂತ್ರಿ ಸ್ಥಾನ ಕೊಡಿಸಿ, ಗೂಟದ ಕಾರಿನಲ್ಲಿ ಬರ್ತಿನಿ. ಆಮೇಲೆ ಈ ಜಿಲ್ಲೆ ರಾಜಕಾರಣ ನೋಡಿ ಎಂದಿದ್ದಾರೆ. ಇನ್ನೂ ಇಂತಹ ಸಾವಿರಾರು ಸಮಾವೇಶಗಳನ್ನು ಮಾಡೋಣ. ಏನು ಬೇಕಾದರೂ ಈ ಜಿಲ್ಲೆಗೆ ತರೋಣ. ನಮ್ಮ ಸರ್ಕಾರ ಇದೆ, ನಾವ್ಯಾಕೆ ಹೆದರಬೇಕು. ಶ್ರೇಯಸ್‍ಪಟೇಲ್ ಸೆಂಟ್ರಲ್‍ನಲ್ಲಿ ಹಾಸನಕ್ಕೆ ನಾಯಕತ್ವ ಕೊಡಿ ಎಂದು ಕೇಳಬೇಕು ಎಂದಿದ್ದಾರೆ.