ಬೆಂಗಳೂರು:- ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಲ್ಲ, ಅರ್ಹತೆ ಇದ್ರೆ ಸಿಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾನು ಅಧಿಕಾರ ಬೇಕು ಅಂತ ದೆಹಲಿಗೆ ಹೋಗೊಲ್ಲ. 2 ವರ್ಷಗಳಲ್ಲಿ ದೆಹಲಿಗೆ ನಾನು ಹೋಗಿರೋದು ಎರಡನೇ ಸಾರಿ. ಇಲಾಖೆ ಕಾರ್ಯಕ್ರಮಗಳಿಗೆ. ನಾನು ಯಾವತ್ತು ಸ್ಥಾನಮಾನ ಬೇಕು ಕೊಡಿ ಅಂತ ದೆಹಲಿಗೆ ಹೋಗಿಲ್ಲ ಎಂದರು. ನನಗೆ ಸಚಿವ ಸ್ಥಾನ ಬೇಕು ಅಂತ ಪ್ರಭಾವವನ್ನು ಬೀರೋದಿಲ್ಲ. ಅರ್ಹತೆ ಇದ್ದರೆ ಕೊಡ್ತಾರೆ ಇಲ್ಲಾ ಅಂದರೆ ಇಲ್ಲ. ದಲಿತ ಸಿಎಂ ಕೂಗು ವಿಚಾರವಾಗಿ ನಾನು ಮಾತಾಡೊಲ್ಲ ಎಂದರು.
ಇನ್ನೂ ಬಿಜೆಪಿಯವರು ಅಧಿಕಾರಕ್ಕೆ ಬಂದ 2014 ರಿಂದ ವೋಟ್ ಚೋರಿ ದೇಶದಲ್ಲಿ ನಡೆಯುತ್ತಿದೆ. ರಾಹುಲ್ ಗಾಂಧಿಯವರು ಮತ್ತೆ ವೋಟ್ ಚೋರಿ ಆರೋಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ರು. ಬಿಜೆಪಿಯವರು ವೋಟ್ ಚೋರಿ ಮಾಡೋದು ಹೊಸದೇನು ಅಲ್ಲ. 2014 ರಿಂದ ವೋಟ್ ಚೋರಿ ಪ್ರಾರಂಭ ಆಗಿದೆ. ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಕುತಂತ್ರ ಮಾಡಿದೆ. ಕೇಂದ್ರ ಚುನಾವಣೆ ಆಯೋಗದವರು ಬಿಜೆಪಿ ಜೊತೆ ಶಾಮೀಲಾಗಿ ವ್ಯವಸ್ಥಿತವಾಗಿ ಇದನ್ನು ಮಾಡ್ತಿದ್ದಾರೆ ಎಂದು ಅರೋಪಿಸಿದರು.


