ಕಲಬುರಗಿ: ಯತ್ನಾಳ್, ಸೋಮಶೇಖರ್ ಬಗ್ಗೆ ದಿನ ಬೆಳಗಾದ್ರೆ ಮಾತನಾಡೋಕೆ ಹೋಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗರಂ ಆಗಿದ್ದಾರೆ. ಬಣ ಫೈಟ್ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಡಿ.7 ರಂದು ಕೋರ್ ಕಮೀಟಿ ಸಭೆ ಇದೆ. ಅವತ್ತು ಎಲ್ಲವೂ ಸರಿ ಹೋಗುತ್ತೆ. ಯತ್ನಾಳ್, ಸೋಮಶೇಖರ್ ಬಗ್ಗೆ ದಿನ ಬೆಳಗಾದ್ರೆ ಮಾತನಾಡೋಕೆ ಹೋಗಲ್ಲ ಎಂದು ಹೇಳಿದರು.
Advertisement
ಇನ್ನೂ ಯಡಿಯೂರಪ್ಪ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪ ಕಂಡ್ರೆ ಇನ್ನೂ ಸಿಎಂಗೆ ಭಯ. ಯಡಿಯೂರಪ್ಪ ಒಬ್ಬ ಹೋರಾಟಗಾರ. ಹಾಗಾಗಿ ಸಿಎಂ ಮತ್ತು ಸರ್ಕಾರಕ್ಕೆ ಭಯ. ಈ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ನಾವು ಯಾವುದಕ್ಕೂ ಹೆದುರುವ ಬಗ್ಗುವ ಮಾತೆ ಇಲ್ಲ ಎಂದು ತಿಳಿಸಿದರು.