ವಾರಾಂತ್ಯ ಬಂತೆಂದರೆ ಮನೆಯಲ್ಲಿ ಬಹುತೇಕರು ಒಂದು ವಾರದ ಮಟ್ಟಿಗೆ ಆಗುವಷ್ಟು ಇಡ್ಲಿ, ದೋಸೆ ಹಿಟ್ಟು ರುಬ್ಬಿಕೊಂಡು ಫ್ರಿಡ್ಜ್ನಲ್ಲಿ ಇಡುತ್ತಾರೆ. ಅದರ ನಂತರ, ತಮಗೆ ಯಾವಾಗ ಬೇಕೋ ಆಗ ಅಂದ್ರೆ, ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಇಡ್ಲಿ ಮತ್ತು ದೋಸೆಯನ್ನು ಸಿದ್ಧಪಡಿಸುತ್ತಾರೆ. ಆದರೆ, ವಾರದ ಕೊನೆಯ ಮೂರು ದಿನಗಳ ನಂತರ, ಕೆಲವೊಮ್ಮೆ ಹಿಟ್ಟು ಹುಳಿಯಾಗುತ್ತದೆ. ಅನೇಕರು ಅದನ್ನು ಎಸೆಯುತ್ತಾರೆ. ಆದರೆ, ಕೆಲವು ಸಲಹೆಗಳನ್ನು ಅನುಸರಿಸುವುದರಿಂದ, ಆ ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಬಹುದು.
ಬಹಳ ಸುಲಭವಾಗಿ ತಯಾರಿಸಬಹುದಾದ ತಿಂಡಿ ಅಂದರೆ ಅದು ಇಡ್ಲಿ ಮತ್ತು ದೋಸೆ. ಆಫಿಸ್ಗೆ ಹೋಗುವವರಿಂದ ಮನೆಯಲ್ಲಿ ಇರುವ ಪ್ರತಿಯೊಬ್ಬರಿಗೂ ಇಡ್ಲಿ-ದೋಸೆ ಫೆವರೇಟ್ ತಿಂಡಿಯಾಗಿದೆ.
ಆದರೆ ಈ ತಿಂಡಿಗೆ ಹಿಟ್ಟನ್ನು ತಯಾರಿಸಲು ಪ್ರತಿದಿನ ಅನೇಕ ಮಂದಿಗೆ ಸಮಯವಿರುವುದಿಲ್ಲ. ಹೀಗಾಗಿ ಮೊದಲೇ ಹಿಟ್ಟನ್ನು ತಯಾರಿಸಿಟ್ಟುಕೊಂಡು ವಾರಕ್ಕೆ ಆಗುವಷ್ಟು ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಹಿಟ್ಟು ಹುದುಗಿದಷ್ಟು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಎಷ್ಟೋ ಬಾರಿ ಈ ಹಿಟ್ಟನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸುವುದರಿಂದ ಅದು ಹುಳಿಯಾಗಬಹುದು.
ಹೌದು, ಕೆಲವರು ತಯಾರಿಸಿದ ಹಿಟ್ಟು ಸುಲಭವಾಗಿ ಹುದುಗುತ್ತದೆ. ಆದರೆ, ಕೆಲವೊಮ್ಮೆ, ಹವಾಮಾನ ವೈಪರೀತ್ಯ ಅಥವಾ ರೆಫ್ರಿಜರೇಟರ್ ರಿಪೇರಿಯಿಂದಾಗಿ ಇಡ್ಲಿ ಹಿಟ್ಟು ಹುಳಿಯಾಗುತ್ತದೆ. ಆದರೆ ಅನೇಕ ಮಂದಿಗೆ ಹಿಟ್ಟು ಹುಳಿಯಾದಾಗ ಏನು ಮಾಡಬೇಕೆಂದು ತಿಳಿದಿಲ್ಲ. ಆದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ತಕ್ಷಣ ಈ ಟಿಪ್ಸ್ ಫಾಲೋ ಮಾಡಿ.
ಶುಂಠಿ ಮತ್ತು ಹಸಿ ಮೆಣಸಿನಕಾಯಿಗಳು: ಇಡ್ಲಿ ಹಿಟ್ಟು ಹುಳಿಯಾಗಿ ಕಂಡು ಬಂದರೆ, ಹಿಟ್ಟಿನ ಪ್ರಮಾಣಕ್ಕೆ ಅನುಗುಣವಾಗಿ ಸ್ವಲ್ಪ ಶುಂಠಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಪೇಸ್ಟ್ ಮಾಡಿ ಹಿಟ್ಟಿಗೆ ಸೇರಿಸಿ. ಇದು ಹುಳಿಯನ್ನು ತೆಗೆದುಹಾಕಿ ರುಚಿಯನ್ನು ಹೆಚ್ಚಿಸುತ್ತದೆ.
ಸಕ್ಕರೆ ಅಥವಾ ಬೆಲ್ಲ: ಹುದುಗಿಸಿದ ಹಿಟ್ಟಿಗೆ ಒಂದು ಚಿಟಿಕೆ ಬೆಲ್ಲ ಅಥವಾ ಸಕ್ಕರೆ ಸೇರಿಸಿ. ಹಿಟ್ಟಿನ ಪ್ರಮಾಣಕ್ಕೆ ಅನುಗುಣವಾಗಿ ಮಿಶ್ರಣ ಮಾಡಿ. ಹೀಗೆ ಮಾಡುವುದರಿಂದ ಹುಳಿ ರುಚಿ ಮತ್ತು ವಾಸನೆ ಕಡಿಮೆಯಾಗುತ್ತದೆ. ರುಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಅಕ್ಕಿ ಹಿಟ್ಟು: ಹುಳಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಲು ಪ್ರಯತ್ನಿಸಿ, ಅದು ಇನ್ನಷ್ಟು ರುಚಿಕರವಾಗಿಸುತ್ತದೆ. ಅಕ್ಕಿ ಹಿಟ್ಟು ಕೂಡ ಯಾವುದೇ ರೀತಿ ಹುಳಿ ಆಗಿರುವುದಿಲ್ಲ.
ರವೆ: ರವೆಯನ್ನು ಹುಳಿ ಹಿಟ್ಟಿನೊಂದಿಗೆ ಮಿಕ್ಸ್ ಮಾಡಿ ಟ್ರೈ ಮಾಡಿ. ಆಗ ಕೂಡ ಹಿಟ್ಟು ಹುಳಿಯಾಗಿರುವುದಿಲ್ಲ. ದೋಸೆ ಕೂಡ ಗರಿಗರಿಯಾಗಿ ಬರುತ್ತದೆ. ಇದು ತಿನ್ನಲು ರುಚಿಕರವಾಗಿರುತ್ತದೆ.
ತಾಜಾ ಹಿಟ್ಟು: ಹುಳಿ ಹಿಟ್ಟಿಗೆ ಸ್ವಲ್ಪ ಹೊಸದಾಗಿ ರುಬ್ಬಿದ ಹಿಟ್ಟನ್ನು ಸೇರಿಸಿ. ಇದು ಹುಳಿಯನ್ನು ತೆಗೆದುಹಾಕಿ ಇಡ್ಲಿ ಮತ್ತು ದೋಸೆಗಳನ್ನು ಮೃದುವಾಗಿಸುತ್ತದೆ.