ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮೀಪದ ಸೊರಟೂರ ಗ್ರಾಮದ ಹಳಿಕೆಮ್ಮ ದೇವಸ್ಥಾನದಲ್ಲಿ ನ. 5, 6 ಮತ್ತು 7ರಂದು ಹಳಿಕೆಮ್ಮದೇವಿ ನೂತನ ಶಿಲಾಮೂರ್ತಿ ಹಾಗೂ ಯಲ್ಲಮ್ಮದೇವಿ, ಪರಶುರಾಮ, ನಾಗದೇವತೆಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ಸೇವಾ ಸಮಿತಿ ಸದಸ್ಯ ವೈ.ಪಿ. ಅಡ್ನೂರ ಹೇಳಿದರು.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ. 5ರಂದು ಸಾಯಂಕಾಲ ಮಹಿಳೆಯರಿಂದ ಪೂರ್ಣಕುಂಭ, ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಮೂರ್ತಿಗಳ ಮೆರವಣಿಗೆ, ನ. 6ರಂದು ಬೆಳಿಗ್ಗೆ ಜಲವಾಸ ಜರುಗುವುದು. ನ. 7ರಂದು ಬ್ರಾಹ್ಮಿ ಮುಹೂರ್ತದಲ್ಲಿ ಹೋಮ, ಹವನ, ಪೂಜಾ ಕೈಂಕರ್ಯದೊಂದಿಗೆ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಜರುಗುವುದು. ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ಮಾಹಾಲಿಂಗೇಶ್ವರಮಠದ ಚನ್ನವೀರ ಸ್ವಾಮೀಜಿ, ಓಂಕಾರೇಶ್ವರಮಠದ ಫಕ್ಕೀರೇಶ್ವರ ಸ್ವಾಮೀಜಿ, ಅನ್ನದಾನೇಶ್ವರ ಶಾಖಾಮಠದ ಶಿವಯೋಗೇಶ್ವರ ಸ್ವಾಮೀಜಿ, ಹೊಸಳ್ಳಿ ಬೂದೇಶ್ವರಮಠದ ಅಭಿನವ ಬೂದೇಶ್ವರ ಸ್ವಾಮೀಜಿ, ಅಡ್ನೂರ ಬ್ರಹ್ಮಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ರಾಮಲಿಂಗೇಶ್ವರಮಠದ ಬಸವರಾಜ ಸ್ವಾಮೀಜಿ ಉಪಸ್ಥಿತರಿರುವರು.
ಸಾನ್ನಿಧ್ಯವನ್ನು ಗುರಯ್ಯ ಹಿರೇಮಠ ವಹಿಸಲಿದ್ದು, ಕಾರ್ಯಕ್ರಮ ಉದ್ಘಾಟಕರಾಗಿ ಸಚಿವ ಎಚ್.ಕೆ. ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಚಂದ್ರವ್ವ ಓಂಕಾರಿ ವಹಿಸಲಿದ್ದು, ಸಂಸದ ಬಸವರಾಜ ಬೊಮ್ಮಾಯಿ, ಪ್ರಕಾಶಯ್ಯ ಹಿರೇಮಠ, ಶೇಷಪ್ಪ ಹುಲಿಕಟ್ಟಿ, ರಾಮಣ್ಣ ತಳವಾರ, ನಾಗಪ್ಪ ಮೆಣಸಿನಕಾಯಿ, ಭೂಮಣ್ಣ ರಣತೂರ, ಬಸಯ್ಯ ಮಠಪತಿ, ಮಾಹಾಂತೇಶ ಘೋಡಕೆ, ಇಮಾಮಸಾಬ ಮಜ್ಜೂರ, ಶಿವಪುತ್ರಪ್ಪ ಹಂಪಿಹೊಳಿ, ಅಶೋಕ ರಣತೂರ ಭಾಗವಹಿಸುವರು ಎಂದು ವೈ.ಪಿ. ಅಡ್ನೂರ ತಿಳಿಸಿದರು.


