ಶಿವಮೊಗ್ಗ: ಬಂಗಾರಪ್ಪ ಅವರು ಬಿಜೆಪಿ ಹೋಗಲಿಲ್ಲ ಎಂದರೆ ಬಿಜೆಪಿಯವರು ಗೆಲ್ಲುತ್ತಿರಲಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ರವರ ಕುರಿತು ಚರ್ಚೆ ಆಗಬಾರದು ಎಂದು ಸಿ.ಟಿ ರವಿ ಆ ರೀತಿ ವರ್ತನೆ ಮಾಡಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ನಮಗೆಲ್ಲ ಬಾಬಾ ಸಾಹೇಬ ಅಂಬೇಡ್ಕರ್ ರವರೇ ದೇವರು.
Advertisement
ಬಂಗಾರಪ್ಪ ಅವರು ಬಿಜೆಪಿ ಹೋಗಲಿಲ್ಲ ಎಂದರೆ ಬಿಜೆಪಿಯವರು ಗೆಲ್ಲುತ್ತಿರಲಿಲ್ಲ. ಬಿಜೆಪಿಯವರು ಕ್ರಿಮಿನಲ್ ಚಿಂತನೆವುಳ್ಳವರು. ಇವರದ್ದು ಒಡೆದಾಳುವ ನೀತಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಸಂವಿದಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಇವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ನಂಬರ್ ಒನ್ ಕ್ರಿಮಿನಲ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.