ಬೆಂಗಳೂರು: ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದರೆ ಎಲ್ಲಾ ಮುಗಿಯುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಪ್ರಹ್ಲಾದ್ ಜೋಷಿ ಫೇಕ್ ಎನ್‌ಕೌಂಟರ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರನ್ನು ಎನ್‌ಕೌಂಟರ್ ಮಾಡುವುದು? ಅದು ಫೇಕ್ ಎನ್‌ಕೌಂಟರ್ ಅಲ್ಲ, ಫೇಕ್ ಕೌಂಟರ್. ಅವರ ತಪ್ಪು ಮುಚ್ಚಿಕೊಳ್ಳೋಕೆ ಫೇಕ್ ಎನ್‌ಕೌಂಟರ್ ಎಂಬ ಫೇಕ್ ಕೌಂಟರ್ ಮಾಡುತ್ತಿದ್ದಾರೆ ಅಷ್ಟೇ ಎಂದು ಗುಡುಗಿದರು.
Advertisement
ಅವರು ನೀಡಿದ ಹೇಳಿಕೆ ಮುಚ್ಚಿ ಹಾಕಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಬಳಸಿದ ಪದಕ್ಕೆ ಪ್ರತಿಯಾಗಿ ಇದೆಲ್ಲ ಸೃಷ್ಟಿ ಮಾಡುತ್ತಿದ್ದಾರೆ. ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದರೆ ಎಲ್ಲಾ ಮುಗಿಯುತ್ತದೆ ಎಂದರು. ಅವರನ್ನು ರಾತ್ರಿ ಎಲ್ಲಾ ಸುತ್ತಿಸಿದ ವಿಚಾರದ ಕುರಿತು ಮಾತನಾಡಿ, ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಗೃಹ ಸಚಿವರು ಅದರ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದರು.