ಮೈಸೂರು: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕಿಕೊಂಡು ಕುರಿ ಕಾಯುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕಿಕೊಂಡು ಕುರಿ ಕಾಯುತ್ತಿದ್ದೆ.
ಜಾಸ್ತಿ ಅಂದರೆ ಹೊಲ ಉಳುತ್ತಿದ್ದೆ ಅಷ್ಟೇ. ನನ್ನ ಜೊತೆ ವೀರ ಮಕ್ಕಳ ಕುಣಿತಿದ್ದ ಇಬ್ಬರು ಮಾತ್ರ ಓದಿದ್ದರು. ಉಳಿದವರು ಓದಲಿಲ್ಲ. ನಾನು ಓದಿದ ಕಾರಣ ಇಲ್ಲಿ ತನಕ ಬಂದೆ. ನನ್ನ ಅಣ್ಣ, ತಮ್ಮ, ಅಕ್ಕಂದಿರು ಯಾರು ಓದಲಿಲ್ಲ. ಅವರೆಲ್ಲಾ ಅಲ್ಲೇ ಉಳಿದು ಬಿಟ್ಟರು. ಯಾವುದಕ್ಕೂ ಹಣೆಬರಹ, ಪೂರ್ವಜನ್ಮದ ಪಾಪ-ಪುಣ್ಯ ಯಾವುದು ನಂಬಬೇಡಿ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮಾನ ಮಾರ್ಯಾದೆ ಇಲ್ಲ. ನಮ್ಮ ಸರ್ಕಾರವನ್ನು ಪಾಪರ್ ಸರಕಾರ ಎಂದು ಟೀಕಿಸುತ್ತಾರೆ. ಆದರೆ ದುಡ್ಡಿಲ್ಲದೆ ಇಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯನಾ? ಎಂಎಲ್‌ಎ ಗಳಿಗೆ ಈ ವರ್ಷ 50 ಕೋಟಿ ರೂ. ಅನುದಾನ. ಕೊಡಲು 8 ಸಾವಿರ ಕೋಟಿ ರೂ. ಎತ್ತಿಟ್ಟುಕೊಂಡಿದ್ದೇನೆ. ಪಾಪರ್ ಸರ್ಕಾರ ಇಷ್ಟು ಕೆಲಸ ಮಾಡಲು ಸಾಧ್ಯ ಎಂದು ಕಿಡಿಕಾರಿದರು.


