ಹಾಸನ: 1994ರಲ್ಲಿ ನಾನು-ಜಾಲಪ್ಪ ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿರಲ್ಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜನಕಲ್ಯಾಣ ಸಮಾವೇಶದಲ್ಲಿ ದೊಡ್ಡಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀವು ಯಾವ ನಾಯಕರನ್ನೂ ಬೆಳೆಸಿಲ್ಲ. ಒಕ್ಕಲಿಗ ನಾಯಕರನ್ನ ತುಳಿದುಹಾಕಿದರು. ಬಚ್ಚೇಗೌಡ, ಬಿ.ಎಲ್. ಶಂಕರ್, ಕೃಷ್ಣಪ್ಪ ಸೇರಿದಂತೆ ಯಾರನ್ನೂ ಬೆಳೆಸಿಲ್ಲ. 1994ರಲ್ಲಿ ನಾನು-ಜಾಲಪ್ಪ ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿರಲ್ಲಿಲ್ಲ.
ಜಾತ್ಯಾತೀತ ಜನಾತದಳ ನಾನು ದೇವೇವೇಗೌಡರು, ಜಾಲಪ್ಪ, ಬಿ.ಆರ್ ಪಾಟೀಲ್ ಎಲ್ಲರೂ ಸೇರಿ ಕಟ್ಟಿದ ಪಕ್ಷ. ಆದ್ರೆ ಅಹಿಂದ ಸಮಾವೇಶ ಮಾಡಿದ್ದಕ್ಕೆ ನನ್ನನು ಪಕ್ಷದಿಂದ ಉಚ್ಚಾಟನೆ ಮಾಡಿದ್ರು. ನಾನು ಪಕ್ಷವನ್ನು ಬಿಡಲಿಲ್ಲ. ಜಾತ್ಯಾತೀತ ಜನತಾದಳ ಕಟ್ಟಿದ್ದು ನಾವೇ ಎಂದು ಕೂಗಿ ಕೂಗಿ ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುವ ಯೋಜನೆಗಳಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ನಮಗೆ ಬರಬೇಕಾದ ಹಣ ಬಿಡುಗಡೆ ಮಾಡುತ್ತಿಲ್ಲ, ನಾವು ಗ್ಯಾರಂಟಿಗಾಗಿ ಹಣ ಖರ್ಚು ಮಾಡುತ್ತೇವೆಂದು ಹಣ ಬಿಡುಗಡೆ ಮಾಡುತ್ತಿಲ್ಲ. ಆದ್ರೂ ನಾವು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮುಂದಿನ ಚುನಾವಣೆವರೆಗೂ ಗ್ಯಾರಂಟಿ ಮುಂದುವರಿಸುತ್ತೇವೆ. ಮುಂದಿನ ಚುನಾವಣೆಯಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.