ಬೆಂಗಳೂರು: ಕರ್ನಾಟಕ ಬಂದ್ ಮಾಡಿದ್ರೆ ಬೆಳಗಾವಿ ನಗರಕ್ಕೆ ತೊಂದರೆ ಆಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾರ್ಚ್ 22ರಂದು ಕರ್ನಾಟಕ ಬಂದ್ ವಿಚಾರ ಕುರಿತು ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶಾಂತಿಯುವಾಗಿ ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ಮಟ್ಟದಲ್ಲಿ ಕೂಡ ಮಾತುಕತೆ ನಡೆಯುತ್ತಿದೆ, ಎಲ್ಲವೂ ಸರಿ ಹೋಗಲಿದೆ ಎಂದಿದ್ದಾರೆ. ನಮ್ಮ ಮೇಲೆ ಆರೋಪ ಮಾಡಬಹುದು, ಆದ್ರೆ ಇದು ಪೊಲೀಸ್ ಅಧಿಕಾರಿ ಮಾಡಿದ ತಪ್ಪು. ನಮ್ಮ ಜವಾಬ್ದಾರಿ ಅಲ್ಲ ಅದು ಪೊಲೀಸ್ ಜವಾಬ್ದಾರಿ. ನಾವು ಮಾಡಿದ ತಪ್ಪಿಲ್ಲ, ಕಂಡಕ್ಟರ್ ಮೇಲೆ ಹಾಕಿದ ಕೇಸ್ಗೆ ಇಷ್ಟು ದೊಡ್ಡದಾಗಿದೆ.
ಈಗಾಗಲೇ ಪೊಲೀಸ್ ಅಧಿಕಾರಿ ವರ್ಗಾವಣೆ ಆಗಿದೆ. ಪೊಲೀಸ್ ನಮ್ಮ ಅಡಿಯಲ್ಲಿ ಕೆಲಸ ಮಾಡಬೇಕು ಅಂದಿಲ್ಲ, ಅಡಿಷನಲ್ ಕೇಸ್ ಹಾಕಿದ್ದು ತಪ್ಪು. ಮೇಲಿನ ಅಧಿಕಾರಿಗಳ ಮಾತು ಕೇಳಬೇಕಿತ್ತು. ಸದ್ಯ ಶಾಂತವಾಗಿದೆ, ಮತ್ತೆ ಕದಡಿಸುವುದು ಬೇಡ. ಬಂದ್ ಮಾಡಿದ್ರೆ ಬೆಳಗಾವಿ ನಗರಕ್ಕೆ ತೊಂದರೆ ಆಗುತ್ತೆ ಎಂದು ಸಚಿವರು ಹೇಳಿದ್ದಾರೆ.



