ನಮ್ಮ ದೇಶ ಬಲಿಷ್ಠವಾದರೆ ಕಾಂಗ್ರೆಸ್ ಶಕ್ತಿಹೀನವಾಗಲಿದೆ: ಪ್ರಧಾನಿ ಮೋದಿ

0
Spread the love

ನವದೆಹಲಿ: ದೇಶ ಬಲಿಷ್ಠವಾದರೆ ಕಾಂಗ್ರೆಸ್ ಶಕ್ತಿಹೀನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಕೋಲಾದಲ್ಲಿ ನಡೆದ ಚುನವಣಾ ರ‍್ಯಾಲಿ ನಡೆಸಿದ ವೇಳೆ ಮಾತನಾಡಿದ ಅವರು, ದೇಶ ಬಲಹೀನವಾದಷ್ಟು ಕಾಂಗ್ರೆಸ್ ಬಲಿಷ್ಠವಾಗಲಿದೆ ಅಂತ ಅವರು ಅಂದುಕೊಂಡಿದ್ದಾರೆ. ಆದ್ರೆ ದೇಶ ಬಲಿಷ್ಠವಾದರೆ ಕಾಂಗ್ರೆಸ್ ಶಕ್ತಿಹೀನವಾಗಲಿದೆ.

Advertisement

ಅದಕ್ಕಾಗಿ ಕಾಂಗ್ರೆಸ್ ದೇಶವನ್ನು ಬಲಿಷ್ಟವಾಗಲು ಬಿಡುವುದಿಲ್ಲ. ಹಿಂದುಳಿದ ವರ್ಗಗಳು, ಎಸ್ಸಿ, ಎಸ್ಟಿ ಆದಿವಾಸಿಗಳ ನಡುವೆ ಬಿರುಕು ಮೂಡಿಸಿ ಬೇರೆ ಬೇರೆ ಮಾಡಿದೆ, ಎಸ್ಸಿ ಸಮಾಜದ ಜನರು ಅವರೊಳಗೆ ಜಗಳವಾಡುತ್ತಿರಲಿ ಎಂದು ಕಾಂಗ್ರೆಸ್ ಬಯಸುತ್ತದೆ ಇದರಿಂದ ಅವರ ಧ್ವನಿ ಕುಂದುತ್ತದೆ, ಮತ್ತು ಮತ ಒಡೆದು ಹೋಗುತ್ತದೆ ಎಂದು ಕಾಂಗ್ರೆಸ್ ಭಾವಿಸಿರುವುದಾಗಿ ಆರೋಪಿಸಿದರು.

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ನ್ಯಾಯಾಲಯದ ಬಗ್ಗೆ ಅಥವಾ ದೇಶದ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. 2014 ರಿಂದ 2024ರ ವರೆಗಿನ 10 ವರ್ಷಗಳಲ್ಲಿ,

ಮಹಾರಾಷ್ಟ್ರವು ನಿರಂತರವಾಗಿ ಬಿಜೆಪಿಯನ್ನು ಪೂರ್ಣ ಹೃದಯದಿಂದ ಆಶೀರ್ವದಿಸಿದೆ. ಇದಕ್ಕೆ ಕಾರಣ ಮಹಾರಾಷ್ಟ್ರದ ಜನರ ದೇಶಭಕ್ತಿ, ರಾಜಕೀಯ ತಿಳಿವಳಿಕೆ ಮತ್ತು ದೂರದೃಷ್ಟಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 5 ತಿಂಗಳಾಗಿದೆ. ಈ 5 ತಿಂಗಳಲ್ಲಿ ಲಕ್ಷ ಕೋಟಿ ರೂ. ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here