ವಿಜಯಪುರ: ತಾಕತ್ತಿದ್ದರೆ ಕುಂಭ ಮೇಳಕ್ಕೆ ಹೋದ ಕಾಂಗ್ರೆಸ್ಸಿಗರನ್ನೆಲ್ಲ ಸಸ್ಪೆಂಡ್ ಮಾಡಲಿ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಯುಟಿ ಖಾದರ್ ಕುಂಭಮೇಳದಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರುಖರ್ಗೆ ಖಾದರ್‌ರನ್ನು ಕಾಂಗ್ರೆಸ್ ಪಕ್ಷದಿಂದ ಡಿಸ್ಮಿಸ್ ಮಾಡಲಿ, ಖರ್ಗೆ ಖಾದರ್ ರನ್ನ ಪ್ರಶ್ನಿಸಲಿ.
ಖಾದರ್ ಕುಂಭ ಮೇಳಕ್ಕೆ ಹೋದ್ರೆ ಬಡವರ ಹೊಟ್ಟೆ ತುಂಬತ್ತಾ? ಎಂದು ಖರ್ಗೆ ಪ್ರಶ್ನಿಸಲಿ. ತಾಕತ್ತಿದ್ದರೆ ಕುಂಭ ಮೇಳಕ್ಕೆ ಹೋದ ಕಾಂಗ್ರೆಸ್ಸಿಗರನ್ನೆಲ್ಲ ಸಸ್ಪೆಂಡ್ ಮಾಡಲಿ. ನಾನು ಕೆಟ್ಟ ಪದ ಬಳಕೆ ಮಾಡ್ತಿದ್ದೆ ಖರ್ಗೆ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಖರ್ಗೆ ಕುಂಭ ಮೇಳದ ಬಗ್ಗೆ ಮಾತಾಡ್ತಾರೆ, ಹಿಂದೂ ಸಮಾಜಕ್ಕೆ ಅಪಮಾನ ಮಾಡುವ, ಗೋ ಹತ್ಯೆ ಮಾಡುವ ಗೂಂಡಾಗಳ ಬಗ್ಗೆ ಆತಂಕ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೇರುಸಲೆಂಗೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ? ಮೆಕ್ಕಾಗೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ? ಧೈರ್ಯ ಇದ್ರೆ ಈ ಬಗ್ಗೆ ಮಾತನಾಡಲಿ ಎಂದು ಈಶ್ವರಪ್ಪ ಖರ್ಗೆಗೆ ಸವಾಲು ಹಾಕಿದ್ದಾರೆ.