ರಾಯಚೂರು:- ವಿಜಯೇಂದ್ರ ಸಿಎಂ ಆಗ್ಬೇಕು ಅಂದ್ರೆ ಎಲ್ಲರ ಸಹಕಾರ ಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಲಿಂಗಸಗೂರಿನಲ್ಲಿ ನಡೆದ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ಎಲ್ಲರ ಸಹಕಾರ ಬೇಕು. ಕಾಂಗ್ರೆಸ್‌ನವರ ಒಳಜಗಳದಿಂದಾಗಿ ಯಾವುದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬರಬಹುದು ಎಂದರು.
ವಿಜಯೇಂದ್ರ ಸಿಎಂ ಆಗಬೇಕಾ ಬೇಡ್ವಾ? ಅಧ್ಯಕ್ಷರಾಗಿ ಮುಂದುವರೆಯಬೇಕಾ ಬೇಡ್ವಾ? ಎಂದು ಜನರನ್ನ ಪ್ರಶ್ನಿಸಿದರು. ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ರಾಜ್ಯ ಸರ್ಕಾರ ಹಳ್ಳಿಗಳಿಗೆ ಬಸ್ ಬಿಟ್ಟಿಲ್ಲ ಹೆಣ್ಮಕ್ಕಳು ಹೇಗೆ ಓಡಾಡುತ್ತಾರೆ. ಸರ್ಕಾರವೇ ಟೇಕ್ ಆಫ್ ಆಗಿಲ್ಲ, ರಾಜ್ಯದ ಜನರಿಗೆ ಟೋಪಿ ಹಾಕಿದ್ದಾರೆ. ಅಯೋಗ್ಯ ಜಮೀರ್ ಅಹ್ಮದ್‌ಗೆ ತಕ್ಕ ಉತ್ತರ ಕೊಡಬೇಕು. ವಕ್ಫ್ ಬೋರ್ಡ್ ರದ್ದಾಗಲು ನೋಟಿಸ್ ಕೊಟ್ಟಿದ್ದೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಉತ್ತರ ಕೊಡಲು ಹೋರಾಟ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ, ಮುಡಾ ಹಗರದಲ್ಲಿ ಸಿಲುಕಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಅಷ್ಟೇ ಸತ್ಯ ಎಂದರು.