ಚಿಕ್ಕಮಗಳೂರು:- ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಕೇಸ್ ಆಗಲಿಲ್ಲ, ನಮ್ಮ ಮೇಲೆ ಎಫ್‍ಐಆರ್ ಆಗುತ್ತೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಹಾಗೂ ಪೊಲೀಸರ ನಡೆಗೆ ಸಿ.ಟಿ ರವಿ ಬೇಸರ ಹೊರಹಾಕಿದ್ದಾರೆ.
ಮಂಡ್ಯದ ಮದ್ದೂರು ಪ್ರಕರಣ ಸಂಬಂಧ ತಮ್ಮ ವಿರುದ್ಧ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾದ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ಪ್ರಧಾನಿಯನ್ನ ಕೊಲ್ಬೇಕು ಎಂದವರ ಮೇಲೆ ಸುಮೋಟೋ ಕೇಸ್ ದಾಖಲಾಗಲಿಲ್ಲ. ಆದರೆ, ಕ್ರಿಯೆಗೆ ತಕ್ಕ ಉತ್ತರ ಕೊಟ್ಟರೆ ಮಾತ್ರ ಎಫ್‍ಐಆರ್ ಆಗುತ್ತೆ.
ಪಾಕಿಸ್ತಾನ ಜಿಂದಾಬಾದ್ ಎಂದರೂ ಸುಮ್ಮನಿರಬೇಕು. ಕಲ್ಲು ಹೊಡೆದು, ಪೆಟ್ರೋಲ್ ಬಾಂಬ್ ಹಾಕಿದರೂ ಸಹಿಸಿಕೊಳ್ಳಬೇಕು. ಸಹನೆಗೂ ಒಂದು ಮಿತಿ ಇದೆ ಅಲ್ವಾ? ಎಷ್ಟು ದಿನ ಅಂತ ಸಹಿಸಿಕೊಳ್ಳೋದು? ಯಾವ ಮತಗ್ರಂಥಗಳು ತಾನೇ ಅಸಹಿಷ್ಣುತೆಯನ್ನ ಪ್ರಚೋದನೆ ಮಾಡುತ್ತವೆ. ಗಣಪತಿ ನೋಡಿದ ಕೂಡಲೇ ಉಗಿಯಬೇಕು ಅನ್ಸತ್ತೆ ಅಂದ್ರೆ ಆ ಪ್ರಚೋದನೆ ಎಲ್ಲಿಂದ ಬರುತ್ತೆ. ಮನೆಯಲ್ಲೇ ಅಪ್ಪ-ಅಮ್ಮ ಹೇಳಿಕೊಟ್ರಾ? ಮದರಸಾಗಳಲ್ಲಿ ಹೇಳಿಕೊಟ್ರಾ? ಅಥವಾ ಹುಟ್ಟುವಾಗಲೇ ಭಯೋತ್ಪಾದಕರ ಬ್ಲಡ್ ಬೆರಕೆಯಾಗಿ ಹುಟ್ಟಿವೆಯೋ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲ್ಲು ಹೊಡೆದವರೇ ಒಪ್ಪಿಕೊಂಡ್ರು ನಮ್ಮಿಂದ ತಪ್ಪಾಗಿದೆ ಅಂತ. ಆದ್ರೆ, ಅವರಿಗೆ ಮಾತ್ರ ಕೇಸ್ ಹಾಕಿದ್ರೆ ಬೇಜಾರಾಗ್ತಾರೆ ಅಂತ ನನ್ನ ಮೇಲೆ ಹಾಗೂ ಯತ್ನಾಳ್ ಮೇಲೆ ಕೇಸ್ ಹಾಕಿದ್ದಾರೆ. ಪಾಪ ಅವರಿಗೆ ಸಂಕಟ ಆಗುತ್ತಿದೆ. ಉದಯಗಿರಿ-ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡ್ದೋರ ಕೇಸ್ ಹಿಂಪಡೆಯಲು ಶಿಫಾರಸು ಮಾಡಿದ್ದೀರಿ. ನಮ್ಮ ಮೇಲೆ ಕೇಸ್ ಹಾಕೋಕೆ ನಿಮಗ್ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.