ನವದೆಹಲಿ:- ಮತಗಳ್ಳತನ ಆಗಿದ್ರೆ ಕರ್ನಾಟಕದಲ್ಲಿ 136 ಸೀಟ್ ಹೇಗೆ ಬಂತು? ಎಂದು ಕಾಂಗ್ರೆಸ್ ನಾಯಕರಿಗೆ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ದೇಶದ ಚುನಾವಣೆ ಆಯೋಗದ ಮೇಲೆ ನಂಬಿಕೆ ಹೊರಟು ಹೋಗಿದೆ. ಮತಗಳ್ಳತನ ಆಗಿದ್ರೆ ಕರ್ನಾಟಕದಲ್ಲಿ 136 ಸೀಟ್ ಹೇಗೆ ಬಂತು? ಅವರು ಮೊದಲು ರಾಜೀನಾಮೆ ನೀಡಲಿ. ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ ಎಂದರು.
ಅವರು ಗೆದ್ದಲ್ಲಿ ಚುನಾವಣೆ ಆಯೋಗ ಇವಿಎಂ ಸರಿಯಿದೆ ಅಂತಾರೆ ಇಲ್ಲಾಂದ್ರೆ ಇಲ್ಲಾ. ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಸರು ಹಾಳು ಮಾಡುತ್ತಿದ್ದಾರೆ. ಇವಿಎಂ ಬೇಡ ಬ್ಯಾಲೆಟ್ ಬೇಕು ಅಂತಾರೆ. ಅಧಿಕಾರ ಸಿಗದಿದ್ದಕ್ಕೆ ಹತಾಶರಾಗಿ ಹೀಗೆ ಹೇಳುತ್ತಿದ್ದಾರೆ ಎಂದರು. ನಾಳೆ ಚುನಾವಣೆ ಇದೆ. ಭಾನುವಾರ ಹಲವು ಹೊಸ ಸದಸ್ಯರಿಗೆ ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆ ಕೆಲಸ ಕಾಮಗಾರಿ ಬಗ್ಗೆ ಅನುಭವ ಹಂಚಿಕೆ ಬಗ್ಗೆ ಕಾರ್ಯಾಗಾರ ಮಾಡಲಾಗಿದೆ. ಸಭೆ ಸಮಾರಂಭಗಳಲ್ಲಿ ಭಾಗಿಯಾಗುವ ಬಗ್ಗೆ, ಸ್ಥಳೀಯ ಸಂಸ್ಥೆಗಳ ಸಮಸ್ಯೆ ಬಗ್ಗೆ ಅರಿವು ಮೂಡಿಸಿದೆ. ನಡ್ಡಾ ಮೋದಿ ಯವರು ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು.



