ಬೆಂಗಳೂರು: ಅವ್ರು ಬರಲಿಲ್ಲ ಅಂದ್ರೆ ಕೈ ಹಿಡ್ಕೊಂಡು ಎಳ್ಕೊಂಡು ಹೋಗೋಕೆ ಆಗುತ್ತಾ? ಎಂದು ಕೆಆರ್ ಪುರಂ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡದ ಬಗ್ಗೆ ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಳೆ ಹಾನಿಯಾಗಿರೋ ಜಾಗಕ್ಕೆ ಬರಲಿಲ್ಲ ಅಂದ್ರೆ ನಾನೇನು ಮಾಡೋಕೆ ಆಗುತ್ತದೆ. ಹಿಂದಿನ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಮಳೆ ನೀರು ತಡೆಯಲು ಕಾಮಗಾರಿ ಆರಂಭ ಆಗಿತ್ತು. ಇದಕ್ಕೆ ಈಗ ಹಣ ಪಾವತಿ ಮಾಡಿಲ್ಲ. ಅನುದಾನ ಕೊಟ್ರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ಇನ್ನೂ ಅವ್ರು ಬರಲಿಲ್ಲ ಅಂದ್ರೆ ಕೈ ಹಿಡ್ಕೊಂಡು ಎಳ್ಕೊಂಡು ಹೋಗೋಕೆ ಆಗುತ್ತಾ? ಕೈ ಹಿಡ್ಕೊಂಡು ಕರ್ಕೊಂಡು ಹೋಗೋದಲ್ಲ. ನನ್ನದೇ ತತ್ವ ಸಿದ್ಧಾಂತಗಳನ್ನ ಇಟ್ಟುಕೊಂಡಿದ್ದೇನೆ. ಹಾಗಾಗಿ ಅವರು ಎಲ್ಲಿ ತನಕ ಬರ್ತಾರೆ. ಅಲ್ಲಿ ತನಕ ಜೊತೆಗೆ ಹೋಗಿದ್ದೇನೆ. ಅವರು ಬಂದಿಲ್ಲ ಅಂದ್ರೆ ನಾನೇನು ಮಾಡೋಕೆ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.