ಬಿಜೆಪಿಯವರಿಗೆ ಧಮ್ಮು, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ: ಸಚಿವ ಚಲುವರಾಯಸ್ವಾಮಿ

0
Spread the love

ಬೆಂಗಳೂರು: ಬಿಜೆಪಿಯವರಿಗೆ ಧಮ್ಮು, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಬಿಜೆಪಿನಾಯಕರ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಯೂರಿಯಾ ಕೊರತೆ ಅಂತ ಬಿಜೆಪಿ ಪ್ರತಿಭಟನೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,

Advertisement

ಕೇಂದ್ರವೇ ನಮಗೆ ಯೂರಿಯಾ ಒದಗಿಸುತ್ತದೆ. ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ. ಇವರು ರಾಜಕೀಯವಾಗಿ ಮಾತಾಡಿದ್ರೆ ನಾವೇನು ಮಾಡೋಕೆ ಆಗಲ್ಲ. ರಾಜ್ಯದ ಒಬ್ಬ ಮಂತ್ರಿಗಾದರೂ ಕೇಂದ್ರಕ್ಕೆ ಪತ್ರ ಬರೆಯುವ ಧಮ್ ಇದ್ಯಾ? ರಾಜ್ಯದ ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ ಎಂದರು.

ಇನ್ನೂ ಕೊಪ್ಪಳದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡ್ತಿದ್ದಾರೆ. ಇದಕ್ಕೆ ಏನೂ ಮಾಡಲು ಆಗಲ್ಲ. ರೈತರ ಪರ ನಾವಿದ್ದೇವೆ. ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾ ಬರಲು ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ. ಬಿಜೆಪಿಯವರಿಗೆ ಧಮ್ಮು, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಅಂತ ಕಿಡಿಕಾರಿದರು.


Spread the love

LEAVE A REPLY

Please enter your comment!
Please enter your name here